October 23, 2025
IMG-20240601-WA0076.jpg

ಬೈಂದೂರು: ಗುಜ್ಜಾಡಿ ಸನ್ಯಾಸಿ ಬಲ್ಲೆ, ಅಂಗನವಾಡಿ ಕೇಂದ್ರ ಪುನರಾರಂಭದ ಕಾರ್ಯಕ್ರಮ

ಬೈಂದೂರು : ಉಡುಪಿ ಜಿಲ್ಲೆಯ ಬೈಂದೂರು ವಿಧಾನಸಭಾ ಕ್ಷೇತ್ರದ ಗುಜ್ಜಾಡಿ ಗ್ರಾಮದ ಕಂಚುಗೋಡು ಸನ್ಯಾಸಿ ಬಲ್ಲೆಯ ಸಮಾನಮನಸ್ಕರ ತಂಡದವರು ಹಳೆ ಕಟ್ಟಡದಲ್ಲಿದ್ದ ಅಂಗನವಾಡಿ ಕೇಂದ್ರವನ್ನು ಸ್ಥಳೀಯ ಶಿಕ್ಷಣಭಿಮಾನಿಗಳು ಸೇರಿಕೊಂಡು ದಾನಿಗಳ ನೆರವಿನಿಂದ ಹೊಸ ಬಾಡಿಗೆ ಕಟ್ಟಡದಲ್ಲಿ ಅಂಗನವಾಡಿ ಪುನರಾರಂಭ ಕಾರ್ಯಕ್ರಮ ಶುಭಾರಂಭಗೊಂಡು ವಿಜೃಂಭಣೆಯಿಂದ ಜರುಗಿತು.
ದೀಪ ಬೆಳಗಿಸಿ, ರಿಬ್ಬನ್ ಕಟ್‌ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಗುಜ್ಜಡಿ ಗ್ರಾಮ ಪಂಚಾಯತ್‌ ಅಧ್ಯಕ್ಷ ತಮ್ಮಯ್ಯ ದೇವಾಡಿಗ ರವರು ಚಾಲನೆ ನೀಡಿ ಮಾತನಾಡಿದ ಅವರು ಅಂಗನವಾಡಿ ಕೇಂದ್ರಕ್ಕೆ ಮುಂದಿನ ದಿನದಲ್ಲಿ ಕಂಚುಗೋಡಿನ ಸನ್ಯಾಸಿ ಬಲ್ಲೆ ಅಕ್ಕ ಪಕ್ಕದಲ್ಲಿ ಸರಕಾರಿ ಜಾಗವನ್ನು ಗುರುತಿಸಿ ಅಂಗನವಾಡಿ ಕೋಣೆಯು ಕಾಯಂ ಜಾಗದಲ್ಲಿ ಇರುವಂತೆ ಮಾಡುವುದು ಹಾಗೂ ಅಂಗನವಾಡಿ ಕೇಂದ್ರಕ್ಕೆ ನನ್ನ ವೈಯಕ್ತಿಕ ಸಹಾಯ ಮಾಡುತ್ತೇನೆ ಎಂದು ಹೇಳಿ ಪುಟಾಣಿ ಮಕ್ಕಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಮರವಂತೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಅನಿಷ್ಕರಿಯ ಗುಜ್ಜಾಡಿ ಗ್ರಾಮ ಪಂಚಾಯತ್‌ ಸದಸ್ಯ ಜನಾರ್ಧನ ಪೂಜಾರಿ, ಊರಿನ ಹಿರಿಯರಾದ ಗಣಪತಿ ಪಟೇಲ್, ಅಂಗನವಾಡಿ ಶಿಕ್ಷಕಿಯರಾದ ಸಾವಿತ್ರಿ, ಮತ್ತು ಸರಸ್ವತಿ ಹಾಗೂ ಪಬ್ಲಿಕ್ ನೆಕ್ಸ್ ವರದಿಗಾರ ದಾಮೋದರ್ ಮೊಗವೀರ ನಾಯಕವಾಡಿ, ಕೃಷ್ಣ ಪಟೇಲ್, ಸತೀಶ್ ಕಂಚುಗೋಡು, ಅಂಬಿಕಾ, ಪ್ರದೀಪ್ ಪಟೇಲ್‌, ನಾಗೇಶ್, ಕೃಷ್ಣ, ರವಿ, ಸಂದೀಪ್, ಸತೀಶ್ ಪಟೇಲ್, ಸದಾಶಿವ, ರಾಘವೇಂದ್ರ ಪೂಜಾರಿ, ಹಾಗೂ ಪುಟಾಣಿ ಮಕ್ಕಳ ಪೋಷಕರು ಊರಿನವರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *