ಬಸ್ಸಿನಿಂದ ಇಳಿಯದ ಮಹಿಳೆಯನ್ನು ಮಹಿಳಾ ಪೋಲೀಸರ ಸಹಾಯದಿಂದ ರಕ್ಷಣೆ,,;ವಿಶು ಶೆಟ್ಟಿ
ಉಡುಪಿ ಆ. 31 ಉಡುಪಿ ಸಿಟಿ ಬಸ್ ನಲ್ಲಿ ಮಹಿಳೆಯೋರ್ವರು ಬಸ್ಸು ಹೋದಲ್ಲೆಲ್ಲ ಹೋಗುತ್ತಾ ಬಸ್ಸಿನಿಂದ ಇಳಿಯಲು ಕೇಳದೆ ಇದ್ದು, ಮಾಹಿತಿ ಪಡೆದ ವಿಶು ಶೆಟ್ಟಿ ಅಂಬಲಪಾಡಿಯವರು ಮಹಿಳಾ ಪೊಲೀಸರ ಸಹಾಯದಿಂದ ರಕ್ಷಿಸಿ ಸಖಿ ಸೆಂಟರಿಗೆ ದಾಖಲಿಸಿದ್ದಾರೆ.ಮಹಿಳೆ ಸುಲೋಚನಾ (45) ಮೇಲ್ನೋಟಕ್ಕೆ ಮನನೊಂದ ಮಹಿಳೆಯಂತೆ ಕಾಣಿಸುತ್ತಿದ್ದು ಆಗುಂಬೆಯವರು ಎಂಬ ಮಾಹಿತಿ ನೀಡಿದ್ದಾರೆ. ಮನೆಯಲ್ಲಿ ತಾಯಿ ಹಾಗೂ ಸಹೋದರಿ ಇದ್ದು ತನ್ನ ಪತಿ ತೀರಿ ಹೋಗಿದ್ದು ಮಕ್ಕಳಿಲ್ಲ ಎಂದಿದ್ದಾರೆ. ಸಂಬಂಧಿಕರು ಮಹಿಳಾ ಠಾಣೆ ಅಥವಾ ಸಖಿ ಸೆಂಟರ್ ಸಂಪರ್ಕಿಸುವಂತೆ ವಿನಂತಿಸಲಾಗಿದೆ.