ಕಸ್ತೂರಿ ರಂಗನ್ ವರದಿಯಿಂದ ಗ್ರಾಮೀಣ ಪ್ರದೇಶದ ಜನರಿಗೆ ನ್ಯಾಯ ಸಿಗಬೇಕು : ಯುವ ಉದ್ಯಮಿ, ಬಿಜೆಪಿ ಮುಖಂಡ ನಿತಿನ್ ನಾರಾಯಣ್
ಬೈಂದೂರು ಅ.01 : ಪಶ್ಚಿಮ ಘಟ್ಟ ಪ್ರದೇಶಗಳ ಉಳಿವಿಗಾಗಿ ಕಸ್ತೂರಿ ರಂಗನ್ ಸಮಿತಿ ವರದಿಯನ್ನು ಜಾರಿ ಮಾಡುವ ಕುರಿತಂತೆ ಕೇಂದ್ರ ಸರಕಾರವು ಆರನೇ ಅಧಿಸೂಚನೆ ಹೊರಡಿಸಿದ್ದು, ಅದು ಈಗ ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟ ತಪ್ಪಲಿನ ಗ್ರಾಮಗಳಲ್ಲಿ ಮತ್ತೆ ಆತಂಕ ಸೃಷ್ಟಿಸಿದೆ. ಈ ವೈಜ್ಞಾನಿಕ ವರದಿ ಜಾರಿಯನ್ನು ವಿರೋಧಿಸಿ, ಈ ವರದಿಯಲ್ಲಿರುವ ಕೃಷಿಭೂಮಿ ಹಾಗೂ ಜನವಸತಿ ಪ್ರದೇಶಗಳನ್ನು ಕೈಬಿಟ್ಟು ನೈಸರ್ಗಿಕ ಅರಣ್ಯಗಳನ್ನು ಮಾತ್ರ ವರದಿಯ ವ್ಯಾಪ್ತಿಗೆ ಒಳಡಿಸಬೇಕು ಅನ್ನುವ ಹಳ್ಳಿಗರ ಹಕ್ಕೋತ್ತಾಯ ಜಿಲ್ಲೆಯಾದ್ಯಂತ ಬಲಗೋಳ್ಳುತ್ತಿದೆ.
ಬೆಂಗಳೂರು ಯುವ ಉದ್ಯಮಿ, ಬಿಜೆಪಿ ಯುವ ಮುಖಂಡ ನಿತಿನ್ ನಾರಾಯಣ್ ಮಾತನಾಡಿ, ಕಳೆದ ಹಲವು ದಿನಗಳಿಂದ ಬೈಂದೂರಿನ ಜನತೆ ಹೋರಾಟ ಮಾಡುತ್ತಿದ್ದಾರೆ, ಕಸ್ತೂರಿ ರಂಗನ್ ವರದಿ ವಿರೋಧಿಸಿ ಇದಕ್ಕೆ ನಾನು ಸಂಪೂರ್ಣವಾಗಿ ಬೆಂಬಲಿಸುತ್ತೇನೆ. ಕೇಲವು ಅಧಿಕಾರಗಳ ನಿರ್ಲಕ್ಷ್ಯತನದಿಂದ ಜಿಪಿಎಸ್ ತಂತ್ರಜ್ಞಾನದಿಂದ ಮೂಲಕ ಸರ್ವೆ ಮಾಡಿದಾರೋ, ಆ ಸರ್ವೇಯನ್ನು ಕೈಬಿಟ್ಟು, ಜನ ಸಾಮಾನ್ಯರಿಗೆ ಅನುಕೂಲವಾಗುವಂತ ರೀತಿಯಲ್ಲಿ ಸ್ಥಳದಲ್ಲಿ ಅಧಿಕಾರಿಗಳು ನಿಂತು ಮ್ಯಾನುವೆಲ್ ಸರ್ವೇ ಮಾಡಿಸಿ, ಕೃಷಿಯನ್ನು ನಂಬಿಕೊಂಡಿವರಿಗೆ ಅನುಕೂಲವಾಗುವಂತೆ ಸರ್ವೇ ಮಾಡಿ, ಯಾರಿಗೂ ತೊಂದರೆಯಾಗದಂತೆ ಈ ವರದಿಯನ್ನು ಸಿದ್ಧಪಡಿಸಬೇಕೆಂದು ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ ಎಂದರು.