


ಐ ಆರ್ ಬಿ ಟೋಲ್ ಪ್ಲಾಜಾ ಶಿರೂರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ರಿ. ಉಡುಪಿ ಇವರ ಸಹಕಾರದಲ್ಲಿ ದಿನಾಂಕ 01/10/2025 ಬುಧವಾರ ಶಿರೂರು ಇಲ್ಲಿ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಯಶಸ್ವಿಯಾಗಿದ್ದು 31 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು.


ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ ಐ ಆರ್ ಬಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ವಿನೋದ್ ನಿಕಂ ಹಾಗೂ ದೀಪಕ್ ಶೆಟ್ಟಿ ಶಿರೂರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ ಇದರ ಸದಸ್ಯರಾದ ಪ್ರಶಾಂತ್ ತಲ್ಲೂರು ಹಾಗೂ ಅಭಿಜಿತ್ ಕುಂದಾಪುರ. ರೆಡ್ ಕ್ರಾಸ್ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕರಾಗಿರುವ ವೀರೇಂದ್ರ ಮತ್ತಿತರು ಉಪಸ್ತಿತರಿದ್ದರು*