
ಉಡುಪಿ. ಫೆ.25ರಂದು ಅಜ್ಜರಕಾಡು ಜಿಲ್ಲಾಸ್ಪತ್ರೆಯಿಂದ ರೋಗಿಯೊಬ್ಬರು ನಾಪತ್ತೆಯಾಗಿದ್ದಾರೆಂದು ಪೋಲಿಸ್ ದೂರು ದಾಖಲಾಗಿದ್ದು, ಅದೇ ದಿನ ರಾತ್ರಿ ನಾಪತ್ತೆ ವ್ಯಕ್ತಿ ಪತ್ತೆಯಾಗಿದ್ದು, ಸಂಬಂಧಿಕರ ವಶಕ್ಕೆ ವಪ್ಪಿಸಲಾಗಿದೆ.
ನಾಪತ್ತೆ ವ್ಯಕ್ತಿ ಕಾರ್ಕಳ ಮಿಯ್ಯಾರಿನ ಸಿಂತವಾಜ್ ಎಂದು ಗುರುತಿಸಲಾಗಿದ್ದು ಅಪರಿಚಿತ ವ್ಯಕ್ತಯೊಬ್ಬರು ಕಲ್ಯಾಣಪುರ ಮೂಡುಕುದ್ರುವಿನಲ್ಲಿ ರಾತ್ರಿ ಹೊತ್ತು ತಿರುಗಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ವಿಶುಶೆಟ್ಟಿ ಅಂಬಲಪಾಡಿಯವರು ಅವರ ಭಾವಚಿತ್ರ ಪಡೆದಾಗ ಕೈಯಲ್ಲಿ ಸೂಜಿಯ ಗುರುತು ಇದ್ದು, ಜಿಲ್ಲಾಸ್ಪತ್ರೆಯಲ್ಲಿ ವಿಚಾರಿಸಿದಾಗ, ನಾಪತ್ತೆ ಪ್ರಕರಣ ತಿಳಿದು ಬಂತು. ಕೂಡಲೇ ಸಂಬಂಧಪಟ್ಟವರು ಹಾಗೂ ಪೋಲಿಸರಿಗೆ ಮಾಹಿತಿ ನೀಡಿ ಸಂಬಂಧಿಕರಿಗೆ ರಾತ್ರಿಯೇ ಹಸ್ತಾಂತರಿಸಲಾಯಿತು.