October 23, 2025
IMG-20240702-WA0022.jpg
ಉಡುಪಿ ; ಮಣಿಪಾಲ -ಇಂಜಿನಿಯರಿಂಗ್ ಪದವಿಯ ಕನಸು ಹೊತ್ತ ಆಸಕ್ತ ವಿದ್ಯಾರ್ಥಿಗಳಿಗೆ ನೇರವಾಗಿ 10ನೇ ತರಗತಿಯ ಅನಂತರ 3 ವರ್ಷಗಳ ಡಿಪ್ಲೋಮಾ ಪೂರೈಸಿ ಯಾವುದೇ ಪ್ರವೇಶ ಪರೀಕ್ಷೆಯ ಒತ್ತಡವಿಲ್ಲದೆ ಲ್ಯಾಟರಲ್ ಎಂಟ್ರಿ ಸೌಲಭ್ಯದೊಂದಿಗೆ ಆಯ್ಕೆಯ ಎಂಜಿನಿಯರಿಂಗ್ ಪದವಿಯ ದ್ವಿತೀಯ ವರ್ಷಕ್ಕೆ ಎಂಐಟಿ ಮಣಿಪಾಲದಲ್ಲಿ ನೇರ ಪ್ರವೇಶಕ್ಕೆ ಸಂಸ್ಥೆಯ ಮೂಲಕ ಸದಾವಕಾಶ ಕಲ್ಪಿಸಲಾಗಿದೆ.
ಸಂಸ್ಥೆಯ ಲ್ಯಾಟರಲ್ ಎಂಟ್ರಿ ಆಸಕ್ತ ವಿದ್ಯಾರ್ಥಿಗಳಿಗೆ ಎಂಐಟಿ ಶುಲ್ಕದ ಒಟ್ಟು ಶುಲ್ಕದಲ್ಲಿ ಶೇ.75ರಷ್ಟು ಶುಲ್ಕವನ್ನು ವಿದ್ಯಾರ್ಥಿ ವೇತನ ರೂಪದಲ್ಲಿ ವಿಶೇಷ ಒದಗಿಸಲಾಗುತ್ತಿದೆ. ಐಟಿಐ ಶಿಕ್ಷಣ ಪೂರೈಸಿದ ಎನ್‌ಸಿವಿಟಿ ಅಥವಾ ಎನ್‌ಟಿಸಿ ಪರೀಕ್ಷೆ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಲಭ್ಯವಿರುವ 8 ವಿಭಾಗಗಳಲ್ಲಿ ವಿದ್ಯಾರ್ಥಿಗಳ ಆಯ್ಕೆಯ ಯಾವುದೇ ವಿಭಾಗಕ್ಕೆ ನೇರವಾಗಿ ದ್ವೀತಿಯ ವರ್ಷಕ್ಕೆ ಪ್ರವೇಶಾತಿ ಹೊಸ ಸೌಲಭ್ಯದ ಲಭ್ಯತೆ

ಸಂಸ್ಥೆಯ ವಿದ್ಯಾರ್ಥಿಗಳ ಶೈಕ್ಷಣಿಕ ಕೌಶಲಾಭಿವೃದ್ಧಿಗಾಗಿ ಕಾಲೇಜು ಆವರಣದಲ್ಲಿಯೇ ಎನ್‌ಎಸ್‌ಡಿಸಿ ಸಂಯೋಜಿತ ಮಣಿಪಾಲ್ ಸ್ಕಿಲ್ ಡೆವಲಪ್‌ಮೆಂಟ್ ಸೆಂಟರ್‌ನ ಅಂತರ ರಾಷ್ಟ್ರೀಯ ಗುಣಮಟ್ಟದ ವಿವಿಧ 18 ವಿಭಾಗಗಳ ಕೌಶಲ ತರಬೇತಿ ಕೇಂದ್ರವು ಈ ವರ್ಷದಿಂದ ಕಾರ್ಯಾರಂಭವಾಗಿದೆ.

ವಿದ್ಯಾರ್ಥಿಗಳ ಆಯ್ಕೆಯ ಊಟ ಮತ್ತು ವಸತಿ ವ್ಯವಸ್ಥೆಗಾಗಿ ಹವಾನಿಯಂತ್ರಿತ ಹಾಗೂ ಹವಾ ನಿಯಂತ್ರಣರಹಿತ, ವಸತಿಗೃಹ, ಉಪಹಾರ ಗೃಹಗಳ ವ್ಯವಸ್ಥೆ ಇದೆ. ಸಾಲ ಸೌಲಭ್ಯ ಮತ್ತು ಪ್ರವೇಶಾತಿ ಬಗ್ಗೆ ಮಾಹಿತಿಗೆ ಆಸಕ್ತಿರು ಕಾಲೇಜಿನ ಆಡಳಿತ ಕಚೇರಿ ಅಥವಾ ಇಮೇಲ್

admission tmapai polytechnic.edu.in ಸಂಪರ್ಕಿಸಬಹುದು.

ವರದಿ; ಜನಾರ್ದನ ಕೆ ಎಂ ಮರವಂತೆ 9972520673

About The Author

Leave a Reply

Your email address will not be published. Required fields are marked *