ಪುತ್ತೂರು: ಕೊಕ್ಕಡದಲ್ಲಿ ಮನೆಯೊಂದರ ಅಂಗಳದಲ್ಲಿ ಕಾರೊಂದನ್ನು ಹಿಂದಕ್ಕೆ ಚಲಾಯಿಸುತ್ತಿದ್ದ ವೇಳೆ ಬಾಲಕನೋರ್ವ ಕಾರಿನಡಿಗೆ ಬಿದ್ದು ಮೃತಪಟ್ಟ ಘಟನೆ ಅ.1ರಂದು ನಡೆದ ಬಗ್ಗೆ ವರದಿಯಾಗಿದೆ.
ಕೊಕ್ಕಡದ ಹಮೀದ್ ಎಂಬವರ 10 ವರ್ಷ ಪ್ರಾಯದ ಪುತ್ರ ನವಾಫ್ ಮೃತಪಟ್ಟವರು.ಹಮೀದ್ ಅವರ ಮನೆಗೆ ಬಂದಿದ್ದ ಸಂಬಂಧಿಕರು ಮನೆಯಂಗಳದಲ್ಲಿ ಕಾರನ್ನು ಹಿಂದಕ್ಕೆ ಚಲಾಯಿಸಿದಾಗ ಕಾರಿನ ಹಿಂಬದಿ ನಿಂತಿದ್ದ ನವಾಫ್ ಅವರು ಕಾರಿನಡಿಗೆ ಬಿದ್ದರು ಎನ್ನಲಾಗಿದೆ

ನವಾಫ್ ಅವರು ಕಾರಿನ ಹಿಂಬದಿ ನಿಂತಿದ್ದದ್ದು ಅರಿವಿಗೆ ಬಾರದೆ ಈ ದುರ್ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.ಮೃತ ದೇಹವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಶವಗಾರ ಕೊಠಡಿಯಲ್ಲಿರಿಸಲಾಗಿದೆ. ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.