ಸ್ವೀಕಾರ ಸೇವಾ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಬೈಂದೂರು: ಆಸರೆ ಚಾರಿಟೇಬಲ್ ಟ್ರಸ್ಟ್ ರಿ. ಮರವಂತೆ ಇವರ ಶೈಕ್ಷಣಿಕ ದತ್ತು ಸ್ವೀಕಾರ ಸೇವಾ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಮರವಂತೆಯ ಸಾಧನಾ ಸಮುದಾಯ ಭವನದ ವೇದಿಕೆಯಲ್ಲಿ ಭಾನುವಾರ ಸಂಜೆ ಅದ್ದೂರಿಯಾಗಿ ನೆರವೇರಿತು.ಈ ಕಾರ್ಯಕ್ರಮದಲ್ಲಿ ತಾಯಿ ಹಾಗೂ ಪೋಷಕರ ಆಶ್ರಯದಲ್ಲಿರುವ ನಾಲ್ಕು ಮಕ್ಕಳನ್ನು ದತ್ತು ತೆಗೆದುಕೊಳ್ಳಲಾಯಿತು. ಹಾಗೂ ಮರವಂತೆ ಭಾಗದಲ್ಲಿ ಸಾರ್ವಜನಿಕವಾಗಿ ಉತ್ತಮ ಸೇವೆ ಸಲ್ಲಿಸುತ್ತಿರುವ ಹಿರಿಯ ರಿಕ್ಷಾ ಚಾಲಕ ಅಣ್ಣಯ್ಯ ಪೂಜಾರಿ, ಆಶಾ ಕಾರ್ಯಕರ್ತೆ ಸುಧಾ B ಪೂಜಾರಿ, ಲೈನ್ ಮ್ಯಾನ್ ಪಾಟೀಲ್, ನಿರಂತರ ಬೀಚ್ ಸ್ವಚ್ಛತೆಯಲ್ಲಿ ತೊಡಗಿಸಿಕೊಂಡ ನಿತಿನ್ ಪೂಜಾರಿ, ಹಾಗೂ ತಂಡದ ನಾಲ್ಕು ಜನರನ್ನ ಸನ್ಮಾನಿಸಲಾಯಿತು. SSLC ಮತ್ತು puc ಯಲ್ಲಿ 90% ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇತ್ತೀಚಿಗೆ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಹೆಸರು ಮಾಡುತ್ತಿರೋ ಸ್ವಾಮಿ ಫ್ರೆಂಡ್ಸ್ ಮಹಿಳಾ ತಂಡ ಹಾಗೂ ಮಹಾಬೊಬ್ಬರ್ಯ ಪುರುಷರ ತಂಡವನ್ನು ಅಭಿನಂದಿಸಲಾಯಿತು.ಈ ಕಾರ್ಯಕ್ರಮದ ವೇದಿಕೆಯಲ್ಲಿ ಮಕ್ಕಳನ್ನು ದತ್ತು ಪಡೆದಿರುವ ಯೋಗಿಂದ್ರ ಮರವಂತೆ ಅವರ ಪರವಾಗಿ ಮಾರ್ಗದರ್ಶಕರಾದ ಮಾಜಿ ಪತ್ರಕರ್ತರಾದ ಎಸ್ ಜನಾರ್ದನ್ , ಶ್ರೀಯುತ ರಾಜು ಪೂಜಾರಿ ಹಾಗೂ ಅತಿಥಿಗಳಾಗಿ ಕೃಷ್ಣಯ್ಯ ಆಚಾರ್ಯ, ಟ್ರಸ್ಟಿಗಳಾದ ಸಂತೋಷ್ ಮೊಗವೀರ, ರವಿ ಮಡಿವಾಳ,ಸತ್ತಿಶ್ ಪೂಜಾರಿ, ಮತ್ತು ಇತರ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು