ಕೋಟ ಠಾಣಾ ವ್ಯಾಪ್ತಿಯಲ್ಲಿ ಅಪಘಾತಕ್ಕೆ ಒಳಗಾದ ಹೊರರಾಜ್ಯದ ಕಾರ್ಮಿಕ
ಚಿಕೆತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಸೇರಿ ವಾಪಸ್ಸಾದ ರೋಗಿ
ಈ ವ್ಯವಸ್ಥೆಯಾನ್ನು ಖಂಡಿಸಿದ ವಿಷು ಶೆಟ್ಟಿ.
ಕೋಟ ಠಾಣಾ ವ್ಯಾಪ್ತಿಯಲ್ಲಿ ಹೊರರಾಜ್ಯದ ಕಾರ್ಮಿಕ ಯುವಕನೊಬ್ಬನಿಗೆ ಅಪಘಾತವಾಗಿ ಹೊಟ್ಟೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿತ್ತು. ತೀವ್ರತೆಯನ್ನು ಅರಿತ ಖಾಸಗಿ ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಸಾಕ್ ಆಸ್ಪತ್ರೆಗೆ ಕಳುಹಿಸಿದ್ದರು. ಆದರೆ ಮಂಗಳೂರಿನ ವೆಸ್ಲಾಕ್ ಆಸ್ಪತ್ರೆ ವಾರ್ಡಗಳು ದುರಸ್ತಿಯಲ್ಲಿದೆ ಎಂಬ ಕಾರಣಕ್ಕಾಗಿ ಅಪಘಾತ ಒಳಗಾದ ಯುವಕನನ್ನು ಪುನಹ ಉಡುಪಿ ಜಿಲ್ಲೆಗೆ ವಾಪಸು ಕಳುಹಿಸಿದ ಘಟನೆ ನಡೆದಿದೆ. !ಸದ್ಯ ಈ ಯುವಕನಿಗೆ ಸಾಮಾಜಿಕ ಕಾರ್ಯಕರ್ತರಾದ ವಿಶು ಶೆಟ್ಟಿ ಅಂಬಲ್ ಪಾಡಿ ಅವರು ತಮ್ಮಿಂದ ಆದಷ್ಟು ಸಹಾಯ ಮಾಡುತ್ತಿದ್ದಾರೆ. ವೆಸ್ಲಾಕ್ ಆಸ್ಪತ್ರೆ ವಾರ್ಡುಗಳು ದುರಸ್ತಿಯಲ್ಲಿದ್ದರೆ ಅದಕ್ಕೆ ಬದಲಿ ವ್ಯವಸ್ಥೆ ಮಾಡಬೇಕಾಗುವುದು ಆಯಾ ಆಸ್ಪತ್ರೆಯ ಮತ್ತು ಆರೋಗ್ಯ ಇಲಾಖೆಯ ಜವಾಬ್ದಾರಿ. ಹಾಗಾದರೆ ಹೊರರಾಜ್ಯದ ಕಾರ್ಮಿಕ ರೋಗಿಗಳು, ರೇಷನ್ ಕಾರ್ಡ್ ಇಲ್ಲದ, ಆಯುಷ್ಮಾನ್ ಸೌಲಭ್ಯ ಸಿಗದ ರೋಗಿಗಳ ಗತಿ ಏನು?! ಕನಿಷ್ಠ ICU,OT
treater ಬದಲಿ ವ್ಯವಸ್ಥೆಯನ್ನು ಮಾಡದೆ ಈ ರೀತಿ ನಿರ್ಲಕ್ಷ ವಹಿಸಿ ರೋಗಿಗಳ ಜೀವದೊಂದಿಗೆ ಆಡುವುದು ಎಷ್ಟು ಸರಿ… !