ಪರಮಪೂಜ್ಯ ಯೋಗ ಬ್ರಹ್ಮ ಋಷಿಪ್ರಭಾಕರ್ ಗುರೂಜಿಯವರ ಆಶೀರ್ವಾದದಿಂದ ಯೋಗ ಶಿಕ್ಷಕರಾದ ಆಚಾರ್ಯ ಶ್ರೀ ಕೇಶವಜೀ ಬೆಳ್ಳಿ ಇವರ ಸಾರಥ್ಯದಲ್ಲಿ “ಸಿದ್ದ ಸಮಾಧಿ ಯೋಗ”ದ ಧ್ಯಾನಿಗಳು ಮತ್ತು ಸಾರ್ವಜನಿಕರಿಂದ ನಡೆದ 5ನೇ ವರ್ಷದ ಕೊಲ್ಲೂರು ಪಾದಯಾತ್ರೆಯು ಒಂದು ಸಾವಿರಕ್ಕೂ ಅಧಿಕ ಭಕ್ತಾದಿಗಳು ಭಾಗವಹಿಸುವಿಕೆಯಿಂದ ಇದೊಂದು ದಾಖಲೆಯ ಪಾದಯಾತ್ರೆಯಾಗಿ ವಿದ್ಯುಕ್ತವಾಗಿ ಸಂಪನ್ನಗೊಂಡಿತು. ಭಾನುವಾರ ಬೆಳಿಗ್ಗೆ 4:10ಕ್ಕೆ ಉಪ್ಪುಂದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೈಂದೂರು ಶಾಸಕರಾದ ಶ್ರೀ ಗುರುರಾಜ್ ಗಂಟಿಹೊಳೆಯವರು ಶುಭಕೋರುವುದರೊಂದಿಗೆ ಚಾಲನೆ ನೀಡಿದರು.