ಕೊಲ್ಲೂರು: ದಿನಾಂಕ :04-03-202 ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂದು ಕಂದಾಯ ನಿರೀಕ್ಷಕರಾದ ರಾಘವೇಂದ್ರ ಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಕುಂದಾಪುರ ತಾಲೂಕು ವಂಡ್ರೆ ಹೋಬಳಿಯಲ್ಲಿ ಶ್ರೀ ಕಂದಾಯ ನಿರೀಕ್ಷಕರಾಗಿರುವ ರಾಘವೇಂದ್ರ ಡಿ ಅವರಿಗೆ ಹೊಸೂರು ಗ್ರಾಮದ ಮರ್ಡಿ ಎಂಬಲ್ಲಿ ಮಂಜುಳ ಎಂಬುವವರು ಸರಕಾರಿ ಜಾಗದಲ್ಲಿ ಅಕ್ರಮವಾಗಿ ಮನೆ ಕಟ್ಟುತ್ತಿದ್ದಾರೆ ಎಂಬ ಬಗ್ಗೆ ಸಾರ್ವಜನಿಕರು ನೀಡಿದ ದೂರಿನ ಮೇರೆಗೆ ರಾಘವೇಂದ್

ಮೇರೆಗೆ ಪಿರ್ಯಾದಿದಾರರು ದಿನಾಂಕ 23/12/2024 ರಂದು ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಲಾಗಿ ಮಂಜುಳ ರವರು ಅವರ ಪಟ್ಟಾ ಜಾಗ ಸರ್ವೆ ನಂಬ್ರ 56/11 ರಲ್ಲಿ ಮನೆ ಕಟ್ಟಲು ಅನುಮತಿ ಪಡೆದುಕೊಂಡು ಅನುಮತಿ ಪಡೆದ ಜಾಗದಲ್ಲಿ ಮನೆ ಕಟ್ಟದೇ ಹತ್ತಿರದ ಸರ್ವೆ ನಂಬ್ರ 141/ * ರಲ್ಲಿ 0.05 ಸರಕಾರಿ ಜಾಗದಲ್ಲಿ ಕಟ್ಟುತ್ತಿರುವುದಾಗಿದೆ. ಬಳಿಕ ಮಾನ್ಯ ತಹಸೀಲ್ದಾರರು ಕುಂದಾಪುರ ಇವರು ಮನೆ ಕಾಮಗಾರಿ ನಿಲ್ಲಿಸುವಂತೆ ನೋಟೀಸ್ ನೀಡಿದ್ದು, ನೊಟೀಸ್ ನೀಡಿದ ಹೊರತಾಗಿಯೂ ಮಂಜುಳ ರವರು ಮನೆ ಕಾಮಗಾರಿಯನ್ನು ಅಶೋಕರವರ ಮುಖೇನ ಮುಂದುವರಿಸಿರುತ್ತಾರೆ. ಮಂಜುಳ ರವರು ಮನೆ ಕಟ್ಟುತ್ತಿರುವ ಜಾಗವು ಸರಕಾರಿ ಜಾಗ ಆಗಿರುವುದರಿಂದ ಸರಕಾರಿ ಜಾಗ ಅಕ್ರಮಣ ಮಾಡಿ ಮನೆ ಕಟ್ಟಿಸುತ್ತಿರುವ ಮಂಜುಳ ರವರ ವಿರುದ್ಧ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 14/2025 :ಕಲಂ 192 (A) KARNATAKA LAND REVENUE (AMENDMENT) ACT ರಂತೆ ಪ್ರಕರಣ ದಾಖಲಾಗಿರುತ್ತದೆ.

7:52

About Janardhana K M

Check Also

ತಾಯಿಯನ್ನು ರಾಡ್‌ನಿಂದ ಕೊಂದ ಪಾಪಿ ಮಗ

By NEWS DESK2ಬೆಂಗಳೂರು: ಕುಡಿಯಲು ಹಣ ಕೊಡದೇ ಇದ್ದದ್ದಕ್ಕೆ ತನ್ನ ಸ್ವಂತ ತಾಯಿಯನ್ನೇ ಮಗನು ರಾಡ್ ನಿಂದ ಹೊಡೆದು ಕೊಂದ …

Leave a Reply

Your email address will not be published. Required fields are marked *