
ಬೆಳ್ತಂಗಡಿ : ಯೂಟ್ಯೂಬರ್ ಸಮೀರ್.ಎಂ.ಡಿ. ಬೆಂಗಳೂರು ನಿವಾಸಕ್ಕೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದಾರೆ. ಧರ್ಮಸ್ಥಳದ ಕುರಿತು ಎಐ ವಿಡಿಯೋ ಸೃಷ್ಟಿಸಿದ್ದ ಬಗ್ಗೆ ಸಮೀರ್ ಎಂ.ಡಿ. ವಿರುದ್ಧ ಪ್ರಕರಣ ದಾಖಲಾಗಿದೆ
ಈ ಹಿನ್ನೆಲೆ ಬೆಳ್ತಂಗಡಿ ಪೊಲೀಸ್ ಠಾಣೆಗೆ 2 ಬಾರಿ ಹಾಜರಾಗಿದ್ದ ಸಮೀರ್ ಎಂ.ಡಿ. ಬಳಿಕ ಸಮರ್ಪಕವಾಗಿ ತನಿಖೆಗೆ ಸಹಕರಿಸುತ್ತಿಲ್ಲ ಎಂಬ ಅರೋಪ ಕೇಳಿ ಬಂದಿದೆ. ಹೀಗಾಗಿ ಬೆಳ್ತಂಗಡಿ ವೃತ್ತ ನಿರೀಕ್ಷಕ ನಾಗೇಶ್ ಕದ್ರಿ ಮತ್ತು ತಂಡ ಎಫ್.ಎಸ್.ಎಲ್.ವಿಭಾಗದ ಸೋಕೊ ಸಿಬ್ಬಂದಿ ಜತೆಯಲ್ಲಿ ಇಂದು(ಸೆ.4) ಮಧ್ಯಾಹ್ನ ಬೆಂಗಳೂರಿನ ಬನ್ನೇರುಎಫ್.ಎಸ್.ಎಲ್.ವಿಭಾಗದ ಸೋಕೊ ಸಿಬ್ಬಂದಿ ಜತೆಯಲ್ಲಿ ಇಂದು(ಸೆ.4) ಮಧ್ಯಾಹ್ನ ಬೆಂಗಳೂರಿನ ಬನ್ನೇರುಘಟ್ಟದ ಹುಳ್ಳಹಲ್ಲಿಯಲ್ಲಿರುವ ಸಮೀರ್ ಬಾಡಿಗೆ ಮನೆಯಮೇಲೆ ದಾಳಿ ನಡೆಸಿದೆ.
ಬೆಳ್ತಂಗಡಿ ನ್ಯಾಯಾಲಯದಿಂದ ಸೆ.3 ರಂದು ಸರ್ಚ್ ವಾರಂಟ್ ಪಡೆದು ತೆರಳಿದ್ದ ತಂಡ ದಾಳಿ ವೇಳೆ ಆತನ ಮನೆಯಲ್ಲಿ ಶೋಧ ನಡೆಸಿದೆ ಎಂದು ತಿಳಿದು ಬಂದಿದೆ.
