

ಪುತ್ತೂರು: ದುಷ್ಕರ್ಮಿಗಳು ಹಟ್ಟಿಯಿಂದ ದನ ಕದ್ದು ಕಡಿದು ಮಾಂಸ ಮಾಡಿ ದನದ ಮಾಲೀಕನ ತೋಟದಲ್ಲೇ ತ್ಯಾಜ್ಯಗಳನ್ನು ಎಸೆದ ಅಮಾನವೀಯ ಘಟನೆ ಪುತ್ತೂರು ತಾಲೂಕಿನ ಪೆರ್ನೆ ಕಡಂಬುವಿನಲ್ಲಿ ನಡೆದಿದೆ.
ಕಡಂಬು ನಿವಾಸಿ ದೇಜಪ್ಪ ಮೂಲ್ಯ ಅವರು ಬೆಳಿಗ್ಗೆ ಎದ್ದು ನೋಡಿದಾಗ ತಮ್ಮ ಹಟ್ಟಿಯಲ್ಲಿದ್ದ ಗಬ್ಬದ ದನ ಕಾಣೆಯಾಗಿತ್ತು. ತೋಟದ ಕಡೆ ನೊಡಿದಾಗ ದುಷ್ಕರ್ಮಿಗಳು ಗೋವನ್ನು ಕಡಿದು ತೋಟದಲ್ಲೇ ಮಾಂಸ ಮಾಡಿ ತ್ಯಾಜ್ಯಗಳನ್ನು ಅಲ್ಲೇ ಎಸೆದಿದ್ದರು. ಘಟನಾ ಸ್ಥಳಕ್ಕೆ ಉಪ್ಪಿನಂಗಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ದೇಜಪ್ಪ ಮೂಲ್ಯ ಅವರ ಮನೆಗೆ ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂದೂ ಸಂಘಟಕರು ಭೇಟಿ ನೀಡಿದ್ದಾರೆ
ಅಮಾನವೀಯವಾಗಿ ದನವನ್ನು ಕಡಿದು ಎಸೆದಿರುವ ದುಷ್ಕರ್ಮಿಗಳ ಕೃತ್ಯಕ್ಕೆ ಹಿಂದೂ ಮುಖಂಡರು ಆಕ್ರೋಶ ವ್ಯಕ್ತಪಡಿಸಿ ಶೀಘ್ರವಾಗಿ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.