October 22, 2025
ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ (ರಿ) ಕರ್ಕಿ ಕನ್ಯಾನ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ರಕ್ತನಿಧಿ ವಿಭಾಗ ಕೆಎಂಸಿ ಮಣಿಪಾಲ ಇವರ ಸಹಕಾರದಲ್ಲಿ ದಿನಾಂಕ 02/03/2025 ಭಾನುವಾರ ಶ್ರೀ ಚೌಡೇಶ್ವರಿ ಕನ್ವೆನ್ನನ್ ಸೆಂಟ‌ರ್,ಕೊಠಾರಿ ಸಮುದಾಯ ಭವನ ಕರ್ಕಿ ಕನ್ಯಾನದಲ್ಲಿ ನಡೆದ ರಕ್ತದಾನ ಶಿಬಿರವನ್ನು ವ್ಯವಸ್ಥಾಪನ ಸಮಿತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಸೌಕೂರು ಇದರ ಅಧ್ಯಕ್ಷರಾದ ಶ್ರೀ ಕಿಶನ್ ಹೆಗ್ಡೆ ಉದ್ಘಾಟಿಸಿದರು.
ಶ್ರೀ ಸೀತಾರಾಮ ಕೊಠಾರಿ ಅಧ್ಯಕ್ಷರು, ಉಡುಪಿ ಜಿಲ್ಲಾ ಕೊಠಾರಿ ಸೇವಾ ಸಂಘ ಇವರ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ

ಮುಖ್ಯ ಅತಿಥಿಯಾಗಿ ಡಾ. ರಂಗನಾಥ್ ವೈ. ವೈದ್ಯಾಧಿಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಟ್ಟಿಯಂಗಡಿ, ಶ್ರೀ ಸತೀಶ್‌ ಸಾಲ್ಯಾನ್ ಮಣಿಪಾಲ್‌, ಅಧ್ಯಕ್ಷರು, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ರಿ. ಉಡುಪಿ, ಶ್ರೀ ರೋವನ್ ಡಿ’ ಕೋಸ್ತಾ ಅಧ್ಯಕ್ಷರು ಲಯನ್ಸ್ ಕ್ಲಬ್ ಹಂಗಳೂರು, ಶ್ರೀ ಜಾನ್ ಡಿ’ಸೋಜ, ಪತ್ರಿಕಾ ಸಂಪಾದಕರು ವಿಜಯ ಕರ್ನಾಟಕ ಕುಂದಾಪುರ,ಶ್ರೀ ರಾಜೀವ ಶೆಟ್ಟಿ, ಮಾಜಿ ಅಧ್ಯಕ್ಷರು, ಗ್ರಾಮ ಪಂಚಾಯತ್ ಹಟ್ಟಿಯಂಗಡಿ, ಶ್ರೀ ಕೆ. ನಾಗಪ್ಪ ಕೊಠಾರಿ, ಸದಸ್ಯರು,ಜಿಲ್ಲಾ ಧಾರ್ಮಿಕ ಪರಿಷತ್ತು ಉಡುಪಿ,ಶ್ರಿ ರಾಜೀವ ಕೊಠಾರಿ, ಉದ್ಯಮಿ, ಹೈದರಾಬಾದ್,ಶ್ರೀ ಸುರೇಂದ್ರ ಕೊಠಾರಿ, ಅಧ್ಯಕ್ಷರು,ಸೀತಾರಾಮ ವಿವಿದೊದ್ದೇಶ ಸಹಕಾರಿ ಸಂಘ (ನಿ) ಕರ್ಕಿ ಕನ್ಯಾನ ಹಾಗೂ ಪ್ರಶಾಂತ್‌ ತಲ್ಲೂರು, ಸದಸ್ಯರು ಅಭಯಹಸ್ತ ಚಾರಿಟೇಬಲ್ ಟ್ರಸ್ಟ್‌ ರಿ. ಉಡುಪಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉಡುಪಿ ಜಿಲ್ಲೆಯ ರಕ್ತದಾನಿ ಸಾಧಕರಾದ ಅಭಯಹಸ್ತ ಟ್ರಸ್ಟ್‌ ಉಡುಪಿ ಇದರ ಸದಸ್ಯರಾದ ಶರತ್ ಕಾಂಚನ್ ಆನಗಳ್ಳಿ ಹಾಗೂ ಸುಹಾನ್ ಷರೀಫ್‌ ಅವರನ್ನು ಸನ್ಮಾನಿಸಲಾಯಿತು.
ಈ ಯಶಸ್ವಿ ರಕ್ತದಾನ ಶಿಬಿರದಲ್ಲಿ 60 ಯೂನಿಟ್ ರಕ್ತವನ್ನು ಸಂಗ್ರಹಿಸಲಾಯಿತು

About The Author

Leave a Reply

Your email address will not be published. Required fields are marked *