
ಉಡುಪಿ ಸೆ.5 :- ಕಳೆದ ಒಂದುವರೆ ತಿಂಗಳ ಹಿಂದೆ ಉಡುಪಿ ಜಿಲ್ಲೆಯ ಹೊರ ವಲಯದಲ್ಲಿ ತೀರಾ ಮನೋರೋಗಿಗಕ್ಕೆ ತುತ್ತಾದ ಯುವಕನನ್ನು ವಿಶುಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ತದನಂತರ ಆತನ ಊರಿಗೆ ಕಳುಹಿಸಿ ಕೊಟ್ಟಿದ್ದರು. ಇದೀಗ ಯುವಕ ಸಂಪೂರ್ಣ ಚೇತರಿಸಿಕೊಂಡಿದ್ದು ಕೆಲಸವೊಂದಕ್ಕೂ ಸೇರಿಕೊಂಡಿದ್ದಾನೆ. ಇಂದು ವಿಶುಶೆಟ್ಟಿಯವರಿಗೆ ಧನ್ಯವಾದವನ್ನು ತಿಳಿಸಲು ಉಡುಪಿಗೆ ಬಂದಿದ್ದು ವಿಶುಶೆಟ್ಟಿಯವರನ್ನು ಸಂಪರ್ಕಿಸಿ ಹೃದಯ ಪೂರ್ವಕ ಕೃತಜ್ಞತೆಯನ್ನು ಹೇಳಿ…ನೀವು ನೀಡಿದ ಸಹಾಯವನ್ನು
