ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟ ಇದರ ನೇತೃತ್ವದಲ್ಲಿ

ರಾಷ್ಟ್ರೀಯ ಹೆದ್ದಾರಿ ತಡೆದು ಬ್ರಹತ್ ಪ್ರತಿಭಟನೆ

ಒಕ್ಕೂಟದ ಅಧ್ಯಕ್ಷ ನಾಗೇಶ್ ಖಾರ್ವಿ

ಬೆಳಕು ಮತ್ತು ಬುಲ್ ಟ್ರಾಲ್ ನಿಯಂತ್ರಿಸುವ  ಪರಿಣಾಮ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಬದುಕು ಬರಡಂತಾಗಿದೆ, ಹಿಗಾಗಿ ಬೆಳಕು ಮೀನುಗಾರಿಕೆಯನ್ನು ನಿಯಂತ್ರಿಸಬೇಕು ಎಂದು ಆಗ್ರಹಿಸಿ  ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಇಂದು ಮರವಂತೆ ಬೀಚ್ನಲ್ಲಿ ಪ್ರತಿಭಟನೆ ನಡೆಸಿದರು, ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಖಾರ್ವಿ ಮಾತನ್ನಾಡಿ

ಬೈಟ್ 1

ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನುನಲ್ಲಿ ಉಲ್ಲೇಖ ಬಿದ್ದರು ಅಧಿಕಾರಿಗಳು ಮೌನ ವಹಿಸಿ ಪರೊಕ್ಷವಾಗಿ ಬೆಳಕು ಮೀನುಗಾರಿಕೆಗೆ ಸಹಕರಿಸುತ್ತಿದ್ದಾರೆ, ಈಗಾಗಲೇ ಹಲವು ಬಾರಿ ಮನವಿ ಮಾಡಿದರೂ, ಗಂಭಿರವಾಗಿ ಪರಿಗಣಿಸದೆ ಬಡಾ ಮೀನುಗಾರರೊಂದಿಗೆ ಚೆಲ್ಲಾಟ ಆಡುತ್ತಿದ್ದು,ಈ ಮೀನುಗಾರಿಕೆ ನಿಯಂತ್ರಿಸಿದ್ದಲ್ಲಿ ಮುಂದಿನ ದಿನಗಳಲ್ಲಿ ಮೀನಿನ ಸಂತತಿ ನಾಸವಾಗುವುದಲ್ಲದೆ ಮುಂದಿನ ದಿನಗಳಲ್ಲಿ ಮೀನುಗಳೆ ಇಲ್ಲದಂತಾಗುತ್ತದೆ ಇದನ್ನು ಅರಿತರು ಬುಲ್ ಟ್ರಾಲ್ ಮತ್ತು ಪರ್ಸಿನ್ ಬೋಟ್ಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾನೂನು ಮೀರಿ ಈ ದಂಧೆಯನ್ನು ಮಾಡಿರುತ್ತಾರೆ ,ಹೀಗಾಗಿ ಮೀನುಗಾರರು ರಸ್ತೆಗೆ ಇಳಿದು ಹೋರಾಟ ನಡೆಸಲು  ಅನಿವಾರ್ಯ
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಮತ್ತು ಘನ ನ್ಯಾಯಾಲಯದ ಆಜ್ಞೆಯಂತೆ ಸುಮಾರು 12 ನಾಟಿಕಲ್ ಮೈಲ್ ಅದರ ಒಳಗಡೆ ಯಾರೋ ಬುಲ್ಟ್ರಾಲ್ ಮತ್ತು ಮತ್ತು ಬೇಳಕು ಮೀನುಗಾರಿಕೆ  ಮಾಡುವಂತಿಲ್ಲ, ಈಗಾಗಲೇ ಮೀನುಗಾರಿಕೆ ಸಚಿವರು ಹೇಳಿಕೆ ಬಡಾ ಮೀನುಗಾರರ ವಿರುದ್ಧವಾಗಿ ಹೇಳಿಕೆ ನೀಡಿದ್ದು  ಮೀನುಗಾರರಿಗೆ ಹೊಟ್ಟೆಯ ಮೇಲೆ ಹೊಡೆದಂತಾಗಿದೆ.
ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ ಮೀನುಗಾರರ ಸಮಸ್ಯೆ ಕುರಿತಂತೆ ನಿರಂತರವಾಗಿ ನಾಯಕರ ಜೊತೆ ಚರ್ಚೆ ನಡೆಸುತ್ತಿದ್ದಾರೆ, ಈಗಾಗಲೇ ಮುಖ್ಯಮಂತ್ರಿಯವರ ಗಮನಕ್ಕೆ ತಂದು ಮೀನುಗಾರರಿಗೆ ಅನ್ಯಾಯ ವಾಗದಂತೆ ಕ್ರಮ ಕೈಗೊಳ್ಳುತ್ತೇನೆ
ಬೈಂದೂರು ಶಾಸಕ ಗುರುರಾಜ್ ಗಂಟಿಹೋಳೆ ಮಾತನಾಡಿ ಬೆಳಕು ಬುಲ್ ಟ್ರಾಲ್  ನಿಷೇಧ ಕಾಯ್ದೆ ಕಾನೂನು ಜಾರಿ ಇದ್ದರು ಅದನ್ನು ಪಾಲಿಸುವ ಮೂಲಕ ಮತ್ಸ್ಯ ಸಂತತಿ ಕಾಪಾಡಿಕೊಳ್ಳಬೇಕಾಗುತ್ತದೆ ಇಲ್ಲದಿದ್ದರೆ ಮೀನುಗಾರರು ಬೀದಿಗಿಳಿಯುವ ಅವಕಾಶ ಬರುತ್ತದೆ .
ಕರ್ನಾಟಕ ರಾಜ್ಯ ಸಾಂಪ್ರದಾಯಕ ನಾಡ ದೋಣಿ ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಕಾರವಿ ಮತ್ತು

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಖಾರ್ವಿ ಮತ್ತು ಕಾರ್ಯದರ್ಶಿಯಾದ ಯಶವಂತ ಖಾರ್ವಿ ಮತ್ತು ಮಂಗಳೂರು ಭಾಗದ ಉತ್ತರ ಕನ್ನಡ ಜಿಲ್ಲೆಯ ಮುಖಂಡರು ಜಿಲ್ಲೆಯ ಅಧಿಕಾರಿಗಳು  ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದು, ಅಧಿಕಾರಿ ವರ್ಗದವರಿಗೆ ಮನವಿಯನ್ನು ನೀಡಿರುತ್ತಾರೆ

ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡ ದೋಣಿ ಮೀನುಗಾರರ ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಖಾರ್ವಿ ,ಮತ್ತು ಕಾರ್ಯದರ್ಶಿಯಾದ ಯಶ್ವಂತ ಖಾರ್ವಿ ,ಅಧಿಕಾರಿಗಳಾದ ಮೀನುಗಾರಿಕೆ ಇಲಾಖೆಯ ಅಂಜನಾದೇವಿ, ದಕ್ಷಿಣ ಕನ್ನಡ ಮೀನುಗಾರಿಕೆ ಇಲಾಖೆಯ ವಿವೇಕ್ ,ರಾಜ್ಯ ಒಕ್ಕೂಟದ ಗೌರವ ಸಲಹೆಗಾರ  ಮದನ್ ಕುಮಾರ್,ಉತ್ತರ ಕನ್ನಡ ಜಿಲ್ಲೆಯ ಮುಖಂಡರಾದ ಸೋಮನಾಥ್ ಮೋಗೆರ, ವಸಂತ ಸುವರ್ಣ, ಸುಧಾಕರ್, ಕೃಷ್ಣಮೂರ್ಡೇಶ್ವರ, ಮತ್ತು  ವೆಂಕಟರಮಣ ಖಾರ್ವಿ ,ಮಂಜುನಾಥ್ ಖಾರ್ವಿ ,ನಾಗೇಶ್ ಖಾರ್ವಿ,ಮತ್ತು ಮರವಂತೆಯ ಸುರೇಶ್ ಖಾರ್ವಿ ಮತ್ತು ಸದಸ್ಯರು ಉಪಸಿತರಿದ್ದರು,

ವರದಿ ;ಜನಾರ್ದನ ಮರವಂತೆ

About Janardhana K M

Check Also

ಹೆಣ್ಣು ಮಕ್ಕಳಿಂದ ಬೀದಿ ಭಜನೆ: ಪ್ರತಿಭಾ ಕುಳಾಯಿಗೆ ತೀಕ್ಷವಾಗಿ ಪ್ರತಿಕ್ರೀಯಿಸಿದ ಶಾಸಕ ಡಾ. ಭರತ್ ಶೆಟ್ಟಿ ಮಂಗಳೂರು : ಬಿಲ್ಲವ …

Leave a Reply

Your email address will not be published. Required fields are marked *