ಕುಂದಾಪುರ: ಬಸ್ಸಿಗೆ ಹಿಂದಿನಿಂದ ಢಿಕ್ಕಿ ಹೊಡೆದ ಲಾರಿ;ಓರ್ವ ವಿದ್ಯಾರ್ಥಿ ಗಂಭೀರ;ಹಲವರಿಗೆ ಗಾಯ

ಕುಂದಾಪುರ: ಖಾಸಗಿ ಬಸ್ಸಿಗೆ ಲಾರಿಯೊಂದು ಹಿಂದಿನಿಂದ
ರಭಸವಾಗಿ ಬಂದು ಢಿಕ್ಕಿ ಹೊಡೆದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರ ತಲ್ಲೂರಿನ ಪ್ರವಾಸಿ ಹೋಟೆಲ್‌ ಎದುರು ಆ.10ರ ಶನಿವಾರ ಬೆಳಗ್ಗೆ ಸಂಭವಿಸಿದೆ

ಬಸ್‌ ಬೈಂದೂರಿಂದ ಕುಂದಾಪುರಕ್ಕೆ ಬರುತ್ತಿತ್ತು. ಅಪಘಾತದ ತೀವ್ರತೆಗೆ ಬಸ್ಸಿನ ಹಿಂಬದಿ ಹಾಗೂ ಲಾರಿಯ ಮುಂಭಾಗ ನಜ್ಜುಗುಜ್ಜಾಗಿದೆ.

ಅಪಘಾತದ ಪರಿಣಾಮ ಬಸ್ಸಿಲ್ಲಿದ್ದ ಓರ್ವ ವಿದ್ಯಾರ್ಥಿ ಗಂಭೀರ ಗಾಯಗೊಂಡಿದ್ದು, 7-8 ಮಂದಿ ವಿದ್ಯಾರ್ಥಿಗಳ ಸಹಿತ ಹಲವರಿಗೆ ಗಾಯವಾಗಿದೆ. ಲಾರಿಯ ಚಾಲಕ, ನಿರ್ವಾಹಕ ಕೂಡಾ ಗಾಯಗೊಂಡಿದ್ದಾರೆ.

ಗಾಯಾಳುಗಳನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

About Janardhana K M

Check Also

ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ; ಡಾ ಬಸವರಾಜ್ ಶೆಟ್ಟಿಗಾರ್

ಶ್ರೀಯುತ ಡಾ… ಬಸವರಾಜ್‌ ಶೆಟ್ಟಿಗಾ‌ರ್ ಇವರಿಗೆ. ಕ್ಷೇತ್ರ ಮಹಾತ್ಮಗಳ ಕೃತಿ ಬ್ರಹ್ಮ ಬಿರುದು ನೀಡಲಾಯಿತು … ಶ್ರೀಯುತರು ಈಗಾಗಲೇ. 68 …

Leave a Reply

Your email address will not be published. Required fields are marked *