October 22, 2025
img_20250711_0830405158956923552777821.jpg
ಬೈಂದೂರು ; ಗುರುಪೂರ್ಣಿಮೆಯ ಪ್ರಯುಕ್ತ ಬೈಂದೂರು ಕ್ಷೇತ್ರದ ಸಿದ್ದ ಸಮಾಧಿ ಯೋಗ ಸಾಧಕರ ವತಿಯಿಂದ ನಾಗೂರು ಶ್ರೀ ಲಲಿತ ಕೃಷ್ಣ ಸಭಾಭವನದಲ್ಲಿ ಗುರುಪೂರ್ಣಿಮಾ ಸಂಭ್ರಮ 2025 ಯೋಗ ಶಿಕ್ಷಕರಾದ ಆಚಾರ್ಯ ಶ್ರೀ ಕೇಶವಜೀ ನೇತೃತ್ವದಲ್ಲಿ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯಿತು.
ಮೊದಲಿಗೆ ಸಾಧಕರಿಂದ ಭಜನಾ ಕಾರ್ಯಕ್ರಮ, ಗುರುಪ್ರಾರ್ಥನೆ ಸತ್ಸಂಗದ ನಂತರ ಅಕಾಲಿಕ ಮರಣ ಹೊಂದಿದ ನಿಸ್ವಾರ್ಥ ಮತ್ತು ಸೇವಾ ಮನೋಭಾವದ ಕ್ರಿಯಾಶೀಲಾ ಸ್ವಯಂ ಸೇವಕರಾದ ಗೀತಾ ಆಚಾರ್ಯ ನಾಯ್ಕನಕಟ್ಟೆ ಇವರ ಆತ್ಮ ಸದ್ಗತಿಗಾಗಿ ಮೌನ ಶ್ರದ್ದಾಂಜಲಿ ಅರ್ಪಿಸಲಾಯಿತು.
ಗುರುಪೂರ್ಣಿಮೆ ವಿಶೇಷದ ಬಗ್ಗೆ ಆಚಾರ್ಯರು ಹಿತನುಡಿಗಳನ್ನು ತಿಳಿಸಿದ ನಂತರ ಗುರುಪೂಜೆ, ಶ್ರೀ ದತ್ತಾತ್ರೇಯ ಗುರುಗಳ ಬೆಳ್ಳಿ ಪಾದುಕೆಗೆ ಪಂಚಾಂಮೃತ ಅಭಿಷೇಕ ಸಹಿತ ಶೋಡಷೋಪಚಾರ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆದು ಕೊನೆಯಲ್ಲಿ ಮಹಾಮಂಗಳಾರತಿ ಪ್ರಸಾದ ವಿತರಣೆ ನಡೆಯಿತು.
ಪೂಜೆ ಮತ್ತು ಪ್ರಸಾದ ವೆಚ್ಚಗಳನ್ನು ಪಾಂಡುರಂಗ ಅಂಗಡಿಮನೆ ಗಿರಿಜಾ ನಾರಾಯಣ ತಾರಪತಿ ಭರಿಸಿದರು.
.
ಮಾಲೀಕರಾದ ಶ್ರೀ ರತ್ನಾಕರ ಉಡುಪರು ಕಾರ್ಯಕ್ರಮ ನಡೆಸಲು ಉಚಿತವಾಗಿ ಸಭಾಂಗಣ ನೀಡಿದರು
ಸುಮಾರು 200ಕ್ಕೂ ಅಧಿಕ ಸಾಧಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪುನೀತರಾದರು.

ಸಾರಥ್ಯ,; ಜನಾರ್ದನ ಕೆ ಎಂ ಮರವಂತೆ

About The Author

Leave a Reply

Your email address will not be published. Required fields are marked *