October 23, 2025
screenshot_20250711_1339445018874809152681872.jpg
ಬೈಂದೂರು;ಮಲ್ಪೆ ನಾಡ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ಇಂದು ಸಂಭವಿಸಿದೆ.
ಪಿತ್ರೋಡಿ ನಿವಾಸಿ, ಮೀನುಗಾರ ನೀಲು (48) ಮೃತ ವ್ಯಕ್ತಿ. ಸಮುದ್ರ ದಲ್ಲಿ ಗಾಳಿ ಮಳೆಯ ತೀವ್ರತೆ ಜೋರಾಗಿದ್ದು ಸಮುದ್ರದ ಅಲೆಯ ಹೊಡೆತಕ್ಕೆ ಇವರಿದ್ದ ನಾಡದೋಣಿ ಮಗುಚಿ ಬಿದ್ದಿದೆ.ಈ ವೇಳೆ ನೀಲು ಅವರು ದೋಣಿಯಲ್ಲಿರುವ ಬಲೆಗಳು ಮಗುಚಿದರಿಂದ ಬಲೆಗಳ ನಡುವೆ ಸಿಲುಕಿ ಮೃತಪಟ್ಟಿದ್ದಾರೆ. ಆಪದ್ಭಾಂಧವ ಈಶ್ವ‌ರ್ ಮಲ್ಪೆ ಮತ್ತು ತಂಡ ಮೃತದೇಹವನ್ನು ಮೇಲಕ್ಕೆತ್ತಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲು ಸಹಕರಿಸಿತು.ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *