

ಉಡುಪಿ ಆ.10: ಉಡುಪಿ ನಗರದ ಹೊರವಲಯದಲ್ಲಿ ವೃದ್ಧರೋರ್ವರು ಅನಾರೋಗ್ಯದಿಂದ ನಡೆಯಲಾಗದೆ ಅಸಹಾಯಕರಾಗಿದ್ದು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಜಿಲ್ಲಾಸ್ಪತ್ರೆ ದಾಖಲಿಸಿದ್ದಾರೆ.
ವೃದ್ಧರ ಹೆಸರು ಕೃಷ್ಣ (75) ಬೇಲೂರು ಗುರುವಾಯನಕೆರೆ ಹಾಗೂ ಮಡದಿ ಮಕ್ಕಳು ಇದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ತೀರಾ ವೃದ್ಧರಾಗಿರುವ ಇವರಿಗೆ ನಡೆಯಲು ಆಗದೆ ಸೊಂಟ ಎಳೆದುಕೊಂಡು ಚಲಿಸುತ್ತಿದ್ದರು.
ಅಪರಿಚಿತ ವೃದ್ಧರು ಇದೀಗ ಬಹಳ ಮಂದಿ ಸಿಗುತ್ತಿದ್ದು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಮುಗಿದ ನಂತರ ಆಸ್ಪತ್ರೆಯಿಂದ ಕರೆದುಕೊಂಡು ಹೋಗಬೇಕು. ಸರಕಾರಿ ಆಸ್ಪತ್ರೆ ಎಂಬುದು ವೃದ್ಧಾಶ್ರಮ ಅಲ್ಲ. ಸರಕಾರದ ವೃದ್ಧಾಶ್ರಮ ಲಭ್ಯವಿಲ್ಲ. ದಯಮಾಡಿ ವೃದ್ಧರ ಸಂಬಂಧಿಕರು ಜಿಲ್ಲಾಸ್ಪತ್ರೆಗೆ ಬಂದು ಸ್ಪಂದಿಸಬೇಕಾಗಿ ವಿಶು ಶೆಟ್ಟಿ ವಿನಂತಿಸಿದ್ದಾರೆ.