October 23, 2025
IMG-20240612-WA0053.jpg

ಬೈಂದೂರು : ತಲ್ಲೂರು ರಾಷ್ಟ್ರೀಯ ಹೆದ್ದಾರಿ ಮಧ್ಯದಲ್ಲಿ ಬಸ್‌ ನಿಲುಗಡೆ ಪ್ರಯಾಣಿಕರಿಗೆ ಸಂಕಷ್ಟ ..!

ಬೈಂದೂರು: ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ತಲ್ಲೂರು ರಾಷ್ಟ್ರೀಯ ಹೆದ್ದಾರಿ ಯ ಮಧ್ಯಭಾಗದಲ್ಲಿ ಬಸ್ಸು ನಿಲ್ಲಿಸಿ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ತಲ್ಲೂರು ಭಾಗದ ಹರೀಶ್ ಆಚಾರ್ಯ ಸಬ್ಲಾಡಿವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ,
ಕಳೆದ ಒಂದು ವಾರಗಳಿಂದ ತಾಲೂಕಿನದ್ಯಂತ ಭಾರಿ ಗಾಳಿ ಮಳೆ ಸುರಿಯುತ್ತಿದ್ದು ಪ್ರತಿ ದಿನ ಶಾಲೆ, ಕಾಲೇಜು ವಿದ್ಯಾರ್ಥಿಗಳು ಹಾಗೂ ಪ್ರಯಾಣಿಕರಿಗೆ ಬಸ್ಸಿಗೆ ಹೋಗಿ ಬರಲು ತಲ್ಲೂರಿನಲ್ಲಿ ಒಳ್ಳೆಯ ಬಸ್ ನಿಲ್ದಾಣವಿದ್ದರೂ ಕೂಡ ಪ್ರಯಾಣಿಕರಿಗೆ ಮಾತ್ರ ಬಸ್ಸಿನವರು ಬಸ್‌ ನಿಲ್ದಾಣದಲ್ಲಿ ನಿಲ್ಲಿಸದೆ ರಾಷ್ಟ್ರೀಯ ಹೆದ್ದಾರಿ ಮಧ್ಯಭಾಗದಲ್ಲಿ ಬಸ್ ನಿಲ್ಲಿಸಿ ಓಡಾಡುವ ಪ್ರಯಾಣಿಕರಿಗೆ ತೊಂದರೆ ಆಗುತ್ತಿದೆ ಎಂದು ಮಾಧ್ಯಮದವರಿಗೆ ತಿಳಿಸಿದರು
ತಲ್ಲೂರಿನಲ್ಲಿ ಒಳ್ಳೆಯ ಬಸ್‌ ನಿಲ್ದಾಣ ಇದೆ ಆದರೂ ಬಸ್‌ ನಿಲ್ದಾಣದಲ್ಲಿ ಬಸ್‌ ನಿಲ್ಲಿಸದೆ ಬಸ್‌ ನಿಲ್ದಾಣವು ಕುಡುಕರ ಹಾಗೂ ಬಿಡಿ ಸಿಗರೇಟ್ ಸೇವನೆ ಮಾಡುವವರಿಗೆ ಹಾಗೂ ಸೋಮಾರಿಗಳ ಅಡ್ಡವಾಗಿ ಪರಿಣಮಿಸಿದೆ, ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ತಲ್ಲೂರು ಗ್ರಾಮ ಪಂಚಾಯತ್‌ ಮತ್ತು ಕುಂದಾಪುರ ಪೊಲೀಸ್ ಠಾಣಾಧಿಕಾರಿಗಳು,
ಕುಂದಾಪುರ ಸಂಚಾರಿ ಪೊಲೀಸರು ಇತ್ತ ಕಡೆ ಗಮನಹರಿಸಿ ಬಸ್ ನಿಲ್ದಾಣ ಇರುವ ಕಡೆ ಬಸ್ ನಿಲ್ಲಿಸಿ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಾರ್ವಜನಿಕರ ಮನವಿಯಾಗಿದೆ.

ವರದಿ; ಜನಾರ್ದನ ಮರವಂತೆ

About The Author

Leave a Reply

Your email address will not be published. Required fields are marked *