ತೀರಾ ಅಸ್ವಸ್ಥ ವ್ಯಕ್ತಿಯ ರಕ್ಷಣೆ :ವಿಶು ಶೆಟ್ಟಿ ಸಮಾಜ ಸೇವೆಗೆ ಸಾರ್ವಜನಿಕರಿಂದ ಪ್ರಸಂಸೆ

ಉಡುಪಿ :ನ 12 :ಉದ್ಯಾವರ ಬಸ್‌ ನಿಲ್ದಾಣದಲ್ಲಿ ಮನನೊಂದ ದೈಹಿಕವಾಗಿ ತೀರಾ ಅಶಕ್ತರಾಗಿ ನಡೆಯಲಾಗದೆ ಕಳೆದ 25 ದಿನಗಳಿಂದ ಬಸ್‌ ನಿಲ್ದಾಣದಲ್ಲಿ ವಾಸ್ತವ್ಯಗೊಂಡಿದ್ದ ವ್ಯಕ್ತಿಯನ್ನು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿಯವರು ರಕ್ಷಿಸಿ ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿರುತ್ತಾರೆ.

ವ್ಯಕ್ತಿಯ ಹೆಸರು ದಿನೇಶ್‌ (ಪ್ರಾಯ 40) ತಂದೆ :ಸೋಮಯ್ಯ, ಸ್ಥಳೀಯ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದ್ದು, ರೋಗಿಯು ಮಾತನಾಡುವ ಸ್ಥಿತಿಯಲ್ಲಿ ಇಲ್ಲದಿರುವುದರಿಂದ ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಬಸ್‌ ನಿಲ್ದಾಣದಲ್ಲಿ ನಿಲ್ಲಲು ಮಹಿಳೆಯರು ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದ್ದು ಈ ಬಗ್ಗೆ ಸ್ಥಳೀಯ ಮಹಿಳೆಯರು ಸಹಕರಿಸುವಂತೆ ವಿಶು ಶೆಟ್ಟಿಯವರಲ್ಲಿ ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿದ ವಿಶು ಶೆಟ್ಟಿಯವರು ಆಂಬುಲೆನ್ಸ್‌ ಮುಖಾಂತರ ಜಿಲ್ಲಾಸ್ಪತ್ರೆಗೆ ದಾಖಲಿಸಿರುತ್ತಾರೆ.

`

ರೋಗಿಯು ಅದೆಷ್ಟು ದಿನಗಳಿಂದ ಸ್ನಾನ ಮಾಡದೇ ಧರಿಸಿದ ಕೊಳಕು ಬಟ್ಟೆಯಿಂದ ಕಾಲ ಕಳೆಯುತ್ತಿರುವುದರಿಂದ ಸುತ್ತಮುತ್ತಲು ದುರ್ವಾಸನೆ ಬರುತ್ತಿತ್ತು.

ಸಂಬಂಧಿಕರು ಉಡುಪಿ ಜಿಲ್ಲಾಸ್ಪತ್ರೆ ಸಂಪರ್ಕಿಸಬೇಕಾಗಿ ಕೋರಲಾಗಿದೆ.

About Janardhana K M

Check Also

ತಾಯಿಯನ್ನು ರಾಡ್‌ನಿಂದ ಕೊಂದ ಪಾಪಿ ಮಗ

By NEWS DESK2ಬೆಂಗಳೂರು: ಕುಡಿಯಲು ಹಣ ಕೊಡದೇ ಇದ್ದದ್ದಕ್ಕೆ ತನ್ನ ಸ್ವಂತ ತಾಯಿಯನ್ನೇ ಮಗನು ರಾಡ್ ನಿಂದ ಹೊಡೆದು ಕೊಂದ …

Leave a Reply

Your email address will not be published. Required fields are marked *