ಮರವಂತೆ ಹೊರ ಬಂದರು ಎರಡನೇ ಹಂತದ ಕಾಮಗಾರಿಗೆ ಚಾಲನೆ

  • ನಿಂತು ಹೋಗುವ ಸ್ಥಿತಿಯಲ್ಲಿದ್ದ ಕಾಮಗಾರಿಗೆ ಮರುಜೀವ ನೀಡಿದ-ಸಚಿವ ಮಂಕಾಳ ವೈದ್ಯ  
  • ವರದಿ; ಜನಾರ್ದನ ಮರವಂತೆ
ಬೈಂದೂರು:ಮರವಂತೆಯಲ್ಲಿ ಕಳೆದ ಎಂಟು ವರ್ಷಗಳಿಂದ ಬ್ರೇಕ್ ವಾಟರ್ ಕೆಲಸ ಆಗದೆ ನೆನೆಗುದ್ದಿಗೆ ಬಿದ್ದಿದ್ದ ಕಾಮಗಾರಿಗೆ ಮರು ಜೀವ ನೀಡುವ ಕೆಲಸ ಮಾಡಲಾಗಿದೆ.ಸುಮಾರು 80 ಕೋಟಿ.ರೂ ವೆಚ್ಚದಲ್ಲಿ ಮರವಂತೆ ಬಂದರಿನ ಎರಡನೇ ಹಂತದ ಕಾಮಗಾರಿ ಕೆಲಸ ಕೂಡಲೆ ಆರಂಭಗೊಳ್ಳಲಿದ್ದು.ಪೂರ್ತಿ ಹಣ ರಾಜ್ಯ ಸರಕಾರವೆ ಭರಿಸಲಿದೆ ಎಂದು ಬಂದರು ಮತ್ತು ಮೀನುಗಾರಿಕಾ ಸಚಿವ ಮಂಕಾಳ ವೈದ್ಯ ಹೇಳಿದರು.
ಬೈಂದೂರು ತಾಲೂಕಿನ ಮರವಂತೆ ಹೊರ ಬಂದರಿನ ಎರಡನೇ ಹಂತದ ಕಾಮಗಾರಿಗೆ ಮಂಗಳವಾರ ಮರವಂತೆಯಲ್ಲಿ  ಗಣಹೋಮ ದ ಮೂಲಕ ಚಾಲನೆ ನೀಡಿದರು . ನಮ್ಮ ಸರಕಾರ ಆಡಳಿತಕ್ಕೆ ಬಂದ ನಂತರ ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿರುವ ಕಾಮಗಾರಿಗಳನ್ನು ಕೈಬೀಡುವ ನಿರ್ಧಾರ ತೆಗೆದುಕೊಂಡಿದ್ದರು.ಮೀನುಗಾರಿಕೆ ಇಲಾಖೆಯಲ್ಲಿನ ಯಾವುದೆ ಕಾಮಗಾರಿಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಬೀಡದೆ ಇದ್ದಿದ್ದರಿಂದ ಮರವಂತೆ ಬಂದರಿನ ಎರಡನೇ ಹಂತದ ಕಾಮಗಾರಿಗೆ ಚಾಲನೆಯನ್ನು ನೀಡಲು ಸಾಧ್ಯವಾಗಿದೆ.ಜ.25 ರ ಒಳಗೆ ಬಂದರು ಕಾಮಗಾರಿಯನ್ನು ಆರಂಭಿಸದೆ ಇದ್ದಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಸೂಚಿಸಲಾಗುವುದು ಎಂದು ಎಚ್ಚರಿಸಿದರು.ಬಂದರಿನ ಅಭಿವೃದ್ಧಿ ಕಾಮಗಾರಿಗೆ ಹೆಚ್ಚುವರಿ ಅನುದಾನ ನೀಡುವಂತೆ ಮೀನುಗಾರರು ಈಗಾಗಲೇ ಮನವಿಯನ್ನು ನೀಡಿದ್ದು ಅದಕ್ಕೆ ಪೂರಕವಾಗಿ ಅಂದಾಜು ಪಟ್ಟಿಯನ್ನು ಸಿದ್ಧಪಡಿಸಿ
ನೋಡಿಕೊಂಡು ಮುಂದಿನ ಕೆಲಸವನ್ನು ಮಾಡಿಕೊಡಲಾಗುವುದು.ಯಾವುದೆ ಕಾರಣಕ್ಕೂ ಮೀನುಗಾರರಿಗೆ ತೊಂದರೆ ಆಗಲು ಬೀಡುವುದಿಲ್ಲ ಎಂದರು.
ಸಿಆರ್ಡ್ ಸಡಳೀಕರಣದಿಂದ
ಕಾರವಾರದ ದಿಂದ ಮಂಗಳೂರು ತನಕ 320 ಕಿ.ಮೀ ಕರಾವಳಿ ತೀರದಲ್ಲಿ ಸಿಆರಡ್ ಕ್ಲಿಯರೆನ್ಸ್ ಮಾಡಲಾಗಿದೆ.ಮುಂದಿನ ದಿನಗಳಲ್ಲಿ ಯಾವುದೆ ರೀತಿಯ ಅಡ್ಡಿ ಆತಂಕವಿಲ್ಲದೆ ಕೆಲಸ ಕಾರ್ಯಗಳನ್ನು  ಮಾಡಲು ಅನುಕೂಲವಾಗಲಿದೆ.ಮೀನುಗಾರಿಕಾ ವಲಯಕ್ಕೆ ಆರ್ಥಿಕ ಕೊರತೆ ಆಗಬಾರದು ಎನ್ನುವ ಉದ್ದೇಶದಿಂದ ಗಂಗೊಳ್ಳಿ ಬಂದರು ಅಭಿವೃದ್ಧಿಗೆ ಕ್ಯಾಬಿನೆಟ್‌ನಲ್ಲಿ 22 ಕೋಟಿ.ರೂ ಮಂಜೂರಾತಿ ನೀಡಲಾಗಿದ್ದು ಕೆಲಸ ಆರಂಭಗೊಳ್ಳಲಿದೆ.ಹಲವಾರು ವರ್ಷಗಳಿಂದ ಬೇಡಿಕೆಯಲ್ಲಿದ್ದ ಸೀ ಆಂಬ್ಯುಲೆನ್‌ಸ್‌ಗೆ ಟೆಂಡ‌ರ್ ಕೂಡ ಕರೆಯಲಾಗಿದೆ. ಕೇಂದ್ರ ಸರಕಾರ ಸೀಮೆಎಣ್ಣೆ ಮೇಲೆ 18% ಜಿಎಸ್‌ಟಿ ವಿಧಿಸಿದ್ದರಿಂದ ದರ ಏರಿಕೆ ಕಂಡಿದ್ದು.ನಮ್ಮ ಸರಕಾರದ ವತಿಯಿಂದ ಬೇಕಾದಷ್ಟು ಕ್ರಮ ಕೈಗೊಂಡಿದೆ,
ಬುಲ್‌ಟ್ರಾಲ್ ಫಿಶಿಂಗ್‌ ಈಗಾಗಲೇ ನಿಷೇಧಗೊಂಡಿದ್ದು ಲೈಟ್ ಫಿಶಿಂಗ್ ನಿಷೇಧಕ್ಕೆ ಕೇಂದ್ರ ಸರಕಾರ ಏಕರೂಪ ಕಾನೂನನ್ನು ಜಾರಿಗೆ ತರಬೇಕು. ಗೋವಾ ಕೇರಳ ಮಹಾರಾಷ್ಟ್ರಗಳಿಂದ ಸಾವಿರಾರು ಬೋಟ್‌ಗಳು ಮೀನುಗಾರಿಕೆಯಲ್ಲಿ ತೊಡಗಿಕೊಳ್ಳುವುದರಿಂದ ನಿಷೇಧಕ್ಕೆ ಕಷ್ಟ ಸಾಧ್ಯ, ಕೇಂದ್ರ ಸರಕಾರದ ಮಟ್ಟದಲ್ಲಿ ಕ್ರಮಕ್ಕೆ ಮುಂದಾಗಬೇಕೆಂದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ,ಮರವಂತೆ ಬಂದರು ಅಭಿವೃದ್ಧಿ ಸಹಿತ ಕೊಡೇರಿ,ಗಂಗೊಳ್ಳಿ,ಬಂದರು ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಘೋಷಣೆ ಮಾಡುವಲ್ಲಿ ಶ್ರಮಿಸಬೇಕು ಎಂದು ಸಚಿವರಲ್ಲಿ ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ ಬೈಂದೂರು ಕ್ಷೇತ್ರದ ಗುರುರಾಜ ಗಂಟಿಹೊಳೆ ಮಾತನಾಡಿ,ಯಾವುದೆ ಸರಕಾರಗಳು ಬಂದರು ಕೂಡ ಮೀನುಗಾರಿಕಾ ಕ್ಷೇತ್ರದ ಕೆಲಸಗಳು ವಿಳಂಭವಾಗುತ್ತದೆ.ಅಂತಹ ಸನ್ನಿವೇಶ ಎದುರಾಗದಂತೆ ಅಭಿವೃದ್ಧಿ ಕಾರ್ಯಗಳು ಚುರುಕಿನಿಂದ ನಡೆಯಬೇಕು ,ಕೇಂದ್ರದ
ಯೋಜನೆಗಳನ್ನು ರಾಜ್ಯದಲ್ಲಿ ಅನುಷ್ಠಾನ ಮಾಡಲು ಸಚಿವರು ಚಿಂತನೆ ಮಾಡಬೇಕು
ಎಂದು ಹೇಳಿದರು.ಮೀನುಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಸಂಸದರ ಕೊಡುಗೆ ಅಪಾರವಾದದ್ದು ಎಂದರು.
ಮರವಂತೆ,ಶ್ರೀರಾಮ ಮಂದಿರ ಮೀನುಗಾರರ ಸೇವಾ ಸಮಿತಿ ಅಧ್ಯಕ್ಷ ರಾದ ಸುರೇಶ್ ಖಾರ್ವಿ, ಮಾರ್ಕೆಟ್ ಸಮಿತಿ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ವಾಸುದೇವ ಖಾರ್ವಿ, ಶೇಖರ್ ಖಾರ್ವಿ,ಸತೀಶ್ ಎಂ ನಾಯಕ್, ಹಕ್ಕಾಗಿ ಜಗದೀಶ್,ಎಡಿ ಸುಮಲತಾ ಮೀನುಗಾರಿಕಾ ಅದಿಕಾರಿಗಳು ಊರಿನ ಮೀನುಗಾರ ಬಂದುಗಳು ಉಪಸ್ಥಿತರಿದ್ದರು.ಶ್ರೀಧರ ಖಾರ್ವಿ ನಿರೂಪಿಸಿ,ವಂದಿಸಿದರು

About Janardhana K M

Check Also

ತಾಯಿಯನ್ನು ರಾಡ್‌ನಿಂದ ಕೊಂದ ಪಾಪಿ ಮಗ

By NEWS DESK2ಬೆಂಗಳೂರು: ಕುಡಿಯಲು ಹಣ ಕೊಡದೇ ಇದ್ದದ್ದಕ್ಕೆ ತನ್ನ ಸ್ವಂತ ತಾಯಿಯನ್ನೇ ಮಗನು ರಾಡ್ ನಿಂದ ಹೊಡೆದು ಕೊಂದ …

Leave a Reply

Your email address will not be published. Required fields are marked *