
ಜೋಡಿಗಳು ಫ್ರೀ ವೆಡ್ಡಿಂಗ್ ಶೂಟ್ ಮಾಡುತ್ತಾರೆ. ಇದೊಂದು ಟ್ರೆಂಡ್ ಆಗಿ ಹೋಗಿದೆ. ಬೇರೆ-ಬೇರೆ ಲೊಕೇಷನ್‌ನಲ್ಲಿ, ಭಿನ್ನ ವಿಭಿನ್ನ ಥೀಮ್‌ಗಳಲ್ಲಿ ನವ ಜೋಡಿಗಳು ಫೋಟೋಗೆ ಪೋಸ್ ಕೊಟ್ಟು ಗಮನ ಸೆಳೆಯುತ್ತಾರೆ. ಕೆಲವೊಮ್ಮೆ ನಾವು ಸೆಲೆಕ್ಟ್ ಮಾಡುವ ಲೊಕೇಷನ್‌ಗೂ ಅನುಮತಿ ಮಡೆಯಬೇಕಾಗುತ್ತದೆ. ಆದರೆ ಇಲ್ಲೊಂದು ಜೋಡಿ ಯಾವೂದೇ ರೀತಿಯ ಅನುಮತಿ ಪಡೆಯದೇ ರೈಲ್ವೇ ಟ್ರ್ಯಾಕ್ ಮೇಲೆ
ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡಿದ್ದು
ಈ ಘಟನೆ ಚಿತ್ರದುರ್ಗದ ಮದಕರಿಪುರ ಅಂಡರ್ ಪಾಸ್ ಬಳಿ ನಡೆದಿದ್ದು, ಜೋಡಿಯೊಂದು ರೈಲ್ವೇ ಹಳಿ ಮೇಲೆ ಫ್ರಿ ವೆಡ್ಡಿಂಗ್ ಶೂಟಿಂಗ್ ಮಾಡುತ್ತಿತ್ತು. ಆದರೆ ರೈಲ್ವೇ ಅಧಿಕಾರಿಗಳಲ್ಲಿ ಯಾವೂದೇ ರೀತಿಯ ಅನುಮತಿ ಪಡೆದಿರಲಿಲ್ಲ.
ಇದೇ ವೇಳೆ ಏಕಾಏಕಿ ರೈಲು ಬಂದಿದ್ದರಿಂದ. ಶೂಟಿಂಗ್ ಹಳಿ ಮೇಲೆ ನಿಂತುಕೊಂಡಿದ್ದ ಐದು ಮಂದಿ ಕ್ಷಣ ಮಾತ್ರದಲ್ಲಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಈ ವಿಷಯ ತಿಳಿದ ಸ್ಥಳಕ್ಕೆ ಗ್ರಾಮಾಂತರ ಠಾಣೆ ಪೊಲೀಸರ ಭೇಟಿ ನೀಡಿ ತರಾಟೆಗೆ ತೆಗೆದುಕೊಂಡಿದ್ದಾರೆ.