October 23, 2025
IMG-20240614-WA0053.jpg

ಬೈಂದೂರು: ತಲ್ಲೂರು ಉಪ ವಿಭಾಗ

ಮಟ್ಟದಲ್ಲಿ ಜನಸಂಪರ್ಕ ಸಭೆ ಅಧೀಕ್ಷಕ ಇಂಜಿನಿಯರ್ ದಿನೇಶ ಉಪಧ್ಯಾಯ ನೇತೃತ್ವದಲ್ಲಿ ತಲ್ಲೂರು ಮೆಸ್ಕಾಂ ಕಚೇರಿಯಲ್ಲಿ ಜರುಗಿತು, ಸಭೆಯಲ್ಲಿ ಸಾರ್ವಜನಿಕರ ಆಹವಾಲು ಕಾರ್ಯಕ್ರಮದಲ್ಲಿ ಮಳೆಗಾಲದಲ್ಲಿ ಸಾಕಷ್ಟು ವಿದ್ಯುತ್‌ ಕಡಿತದ ಬಗ್ಗೆ ಚರ್ಚೆ ಪ್ರಸ್ತಾಪವಾಗಿದ್ದು ಅಧಿಕಾರಿಗಳ ಎದುರೆ ಸ್ಥಳೀಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.

ಸಭೆಯಲ್ಲಿ ದಲಿತ ಮುಖಂಡರು ಹಾಜರಿದ್ದು ವಿದ್ಯುತ್‌ ಇಲಾಖೆಯಿಂದ ಆಗುವ ಹಲವು ಸಮಸ್ಯೆಗಳ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು ಹಾಗೂ ಪ್ರತಿ ದಿನ ಅನವಶ್ಯಕವಾಗಿ ಲೋಡ್ ಸೆಟ್ಟಿಂಗ್‌ ನೆಪದಲ್ಲಿ ವಿದ್ಯುತ್ ಕಡಿತ ಮಾಡುವುದರ ವಿರುದ್ಧ ಹಾಗೂ ವಿದ್ಯುತ್‌ ದುರಸ್ಥಿಗೆ ಬೇಕಾಗುವ ಸಲಕರಣೆಗಳನ್ನು ಒದಗಿಸುವಂತೆ ಮೆಸ್ಕಾಂ ಇಲಾಖೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕಿದರು.

ಈ ಸಭೆಯಲ್ಲಿ ಗಂಗೊಳ್ಳಿ ತಲ್ಲೂರು ಕಟ್ ಬೆಲ್ಲೂರು ಹೆಮ್ಮಾಡಿ ಗುಲ್ವಾಡಿ ಹಟ್ಟಿ ಅಂಗಡಿ ಗುಜ್ಜಾಡಿ ಹೊಸಾಡು ತ್ರಾಸಿ ವಂಡ್ಲೆ ಚಿತ್ತೂರು ಕೆರಾಡಿ ಅಂಪಾರು ಅಜ್ರ ಕರ್ಕುಜೆ ನಾಡ ಆಲೂರು ಹಕ್ಲಾಡಿ ಭಾಗದ ಸಾರ್ವಜನಿಕರು ಹಾಜರಿದ್ದರು ಹಾಗೂ ದಲಿತ ಮುಖಂಡರು ತ್ರಾಸಿ ಭಾಗದ ಸತೀಶ್ ಕಂಚುಗೋಡು, ಚಂದ್ರಶೇಖ‌ರ್ ಗುಲ್ವಾಡಿ, ಉದಯ್ ಕುಮಾ‌ರ್ ತಲ್ಲೂರು ಪತ್ರಕರ್ತರು ಕಾರ್ಯನಿರ್ವಾಹಕ ಇಂಜಿನಿಯರ್ ಗುರುಪ್ರಸಾದ್ ಭಟ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಹರೀಶ ಕುಮಾರ್,ಗಂಗೊಳ್ಳಿ &ನಾಡ ಕಿರಿಯ ಇಂಜಿನಿಯ‌ರ್ ದಿನೇಶ ಶೆಟ್ಟಿ ತಲ್ಲೂರು ಸಹಾಯಕ ಇಂಜಿನಿಯರ್ ಸುರೇಶಬಾಬು, ತಲ್ಲೂರು ಸಹಾಯಕ ಇಂಜಿನಿಯರ್ ಶೋಭ ಜಿ, ವಂಡ್ಲೆ ಕಿರಿಯ ಇಂಜಿನಿಯರ ರಾಜೇಶ್ ಹಾಗೂ ಮೆಸ್ಕಾಂ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

ವರದಿ; ಜನಾರ್ದನ ಕೆ ಎಂ ಮರವಂತೆ

About The Author

Leave a Reply

Your email address will not be published. Required fields are marked *