October 21, 2025
img-20250809-wa00897357198130125960806.jpg
ಯೋಗ ಶಿಕ್ಷಕರಾದ ಆಚಾರ್ಯ ಶ್ರೀ ಕೇಶವಜೀ ಯವರ ನೇತೃತ್ವದಲ್ಲಿ ತ್ರಾಸಿ, ಮರವಂತೆ, ನಾವುಂದ, ನಾಗೂರು, ಕಂಬದಕೋಣೆ, ನಾಯ್ಕನಕಟ್ಟೆ, ಉಪ್ಪುಂದ ಬೀಜರು, ಬೈಂದೂರು, ಶಿರೂರು, ಭಟ್ಕಳ ದಿಂದ ಆಗಸ್ಟ್ 9ರಂದು ಸುಮಾರು 120ಕ್ಕೂ ಅಧಿಕರ ಯೋಗ ಸಾಧಕರು  ಮಂತ್ರಾಲಯ ತಲುಪಿರುತ್ತಾರೆ,
ದಿನಾಂಕ 10ಪುರ್ವಾರಾಧನೆ 11ರ ಮಧ್ಯಾರಾಧನೆ ಮತ್ತು 12ರ ಉತ್ತರಾರಾಧನೆ ಯಲ್ಲಿ ಎಲ್ಲಾ ಸ್ವಯಂ ಸೇವಕರು ಸಂಪೂರ್ಣವಾಗಿ ತಮ್ಮನ್ನ ತಾವು ಬಡಿಸುವ ಕಾರ್ಯಕ್ರಮ, ತರಕಾರಿ ಹೆಚ್ಚುವುದು, ಪರಿಮಳ ಪ್ರಸಾದ ಪ್ಯಾಕ್ ಮಾಡುವುದು, ಮಂತ್ರಾಲಯ ನಗರವನ್ನು ಸ್ವಚ್ಛ ಮಾಡುವುದು ಮತ್ತು ನಗರ ಸಂಕೀರ್ತನೆ ಯಲ್ಲಿ ತೊಡಗಿಸಿಕೊಂಡರು.
ಅನ್ನಪೂರ್ಣ ಛತ್ರದಲ್ಲಿ ಒಟ್ಟು 8ಕೌಂಟ‌ರ್ ಮಾಡಿ ಅದರಲ್ಲಿ 3ಮತ್ತು 4ನೇ ಕೌಂಟರ್ ಅನ್ನು ಬೈಂದೂರು ಭಾಗದ ಆಚಾರ್ಯ ಕೇಶವಜೀ ಟೀಮ್ ಗೆ ನೀಡಿರುವುದರಿಂದ 3ದಿನಗಳಕಾಲ ಭಕ್ತ ಸಾಗರ ಇರುವುದರಿಂದ  7ಟೀಮ್ ಮಾಡಿ ಬೆಳಿಗ್ಗೆ 9:30ರಿಂದ ರಾತ್ರಿ 12ರ ತನಕ ಬಡಿಸುವ ಕಾರ್ಯದಲ್ಲಿ ಸ್ವಯಂ ಸೇವಕರು ಪುನೀತರಾದರು.
ಪರಮ ಪೂಜ್ಯ ಯೋಗಬ್ರಹ್ಮ ಶ್ರೀ ಋಷಿ ಪ್ರಭಾಕ‌ರ್ ಗುರೂಜಿ ಯವರ ತಪಸ್ಸಿನ ಫಲದಿಂದ ಅವರ ಶಿಷ್ಯರಾದ SSY ಸಾಧಕರಿಗೆ ಮಂತ್ರಾಲಯದಲ್ಲಿ ಆರಾಧನಾ ಸಮಯ ಸೇವೆಗೆ ಅವಕಾಶ ಸಿಕ್ಕಿದ್ದು ಪೂರ್ವ ಜನ್ಮದ ಪುಣ್ಯವೇ ಆಗಿರತ್ತದೆ,
2008ನೇ ಇಸ್ವಿ ಯಿಂದ ಕಳೆದ 18ವರ್ಷದಿಂದ ಆಚಾರ್ಯ ಕೇಶವಜಿ ಯವರು ತಮ್ಮ ಸಾಧಕರನ್ನು ಕರೆದುಕೊಂಡು ಹೋಗಿ ಗುರುರಾಯರ  ಸೇವೆ ಮಾಡಿ ಬರುತ್ತಿರುವುದು ಪುಣ್ಯದ ಕೆಲಸ,
.
ಕಾಯ ವಾಚ ಮನಸ್ಸಾ ಮಂತ್ರಾಲಯದಲ್ಲಿ ಸಂಪೂರ್ಣವಾಗಿ ತಮ್ಮನ್ನು ಸೇವೆಯಲ್ಲಿ ತೊಡಗಿಸಿಕೊಂಡ ಎಲ್ಲಾ ಸಾಧಕರಿಗೆ ಅಲ್ಲಿ ಸೇವೆಗೆ ಅವಕಾಶ ನೀಡಿದ ಮಂತ್ರಾಲಯ ಶ್ರೀ ಮಠ ಕ್ಕೂ ಪೂಜ್ಯ ಶ್ರೀಗಳಿಗೂ ಋಷಿ ಸಂಸ್ಕೃತಿ ವಿದ್ಯಾ

ವಿದ್ಯಾ ಕೇಂದ್ರ ಬೆಂಗಳೂರು ಇದರ ಟ್ರಷ್ಟಿ ಗಳಿಗೂ ಮತ್ತು ಪೂಜ್ಯ ಋಷಿ ಪ್ರಭಾಕರ್ ಗುರೂಜಿಯವರಿಗೂ ತುಂಬು ಹೃದಯದ ಅಭಿನಂದನೆಗಳನ್ನು ಆಚಾರ್ಯರು ತಿಳಿಸಿರುತ್ತಾರೆ.

About The Author

Leave a Reply

Your email address will not be published. Required fields are marked *