
ಬೈಂದೂರು,ಉಪ್ಪುಂದ ವಲಯ ನಾಗರಬನ ಶ್ರೀರಾಮ ಭಜನ ಮಂದಿರದಲ್ಲಿ ಒಂದು ವಾರಗಳ ಕಾಲ ಭಜನಾ ಕಮ್ಮಟ ತರಬೇತಿ ಶಿಬಿರ ಸಮಾರೋಪ ಸಮಾರಂಭ ಜನತಾ ಕಾಲೋನಿ ಉಪ್ಪುಂದದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಕೃಷ್ಣ ‘ಪೂಜಾರಿ, ಧ.ಗ್ರಾ.ಯೋಜನಾಧಿಕಾರಿ ವಿನಾಯಕ ಪೈ, ಭಜನ ಮಂದಿರದ ಅಧ್ಯಕ್ಷ ವಾಸುದೇವ ಖಾರ್ವಿ, ಮಂಜುನಾಥ ಖಾರ್ವಿ, ತಾಲ್ಲೂಕು ಭಜನಾ ಪರಿಷತ್ತಿನ ಪದಾಧಿಕಾರಿಗಳಾದ ಮಂಜು ಪೂಜಾರಿ,ರೋಹಿತ್ ಖಾರ್ವಿ, ಮಂಜುನಾಥ
ಉಳ್ಳೂರು,ಕೃಷ್ಣ ಪೂಜಾರಿ ತ್ರಾಸಿ,ಮಂಜುನಾಥ ಪಡುಕೋಣೆ,
ನಾರಾಯಣ ಖಾರ್ವಿ, ಜಯರಾಮ ಶೆಟ್ಟಿ ಉಪ್ಪುಂದ, ಪೂರ್ಣಿಮಾ, ಬಾಬು ದೇವಾಡಿಗ, ಹಿರಿಯ ಭಜನೆಗಾರರಾದ ಈಶ್ವರ ಖಾರ್ವಿ, ಈಶ್ವರ ಮೊಗವೀರ, ಸಂಪನ್ಮೂಲ ವ್ಯಕ್ತಿ ರಾಜೇಂದ್ರ, ಕಿರಣ ಮೊವಾಡಿ, ಕವಿತಾ, ಸಂದೇಶ, ವಿಶ್ವನಾಥ ಖಾರ್ವಿ ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿರಿಯ ಹಾಗೂ ಕಿರಿಯ ಭಜನ ಹಾಡುಗಾರರನ್ನು ಗೌರವಿಸಲಾಯಿತು. ಸುಭಾಷ್ ಖಾರ್ವಿ ಸ್ವಾಗತಿಸಿ, ನಿರ್ವಹಿಸಿದರು. ಪ್ರವೀಣ್ ವಂದಿಸಿದರು.
ಪ್ರವೀಣ್ ಮತ್ತು ಮನೋಜ ತಂಡದ ತರಬೇತುದಾರರು ಉಪಸ್ಥಿತರಿದ್ದರು.