October 23, 2025
IMG-20240713-WA0032.jpg

ಬೈಂದೂರು ತಾಲೂಕು ಮರವಂತೆ ಮೀನುಗಾರರ ಸಹಕಾರ ಸಂಘ ನಿಯಮಿತ ಮರವಂತೆ ಇದರ
23-24 ನೇ ಸಾಲಿನ ಸರ್ವ ಸದಸ್ಯರ 82ನೇ ವಾರ್ಷಿಕ ಮಹಾಸಭೆಯು  ಮರವಂತೆ ಮೀನುಗಾರರ ಸಹಕಾರ ಸಮುದಾಯ ಭವನದಲ್ಲಿ ಪ್ರವೀಣ ಇವರ ಅಧ್ಯಕ್ಷತೆಯಲ್ಲಿ ನಡೆಯಿತು ಅಧ್ಯಕ್ಷರ ಆಸನ ಸ್ವೀಕಾರ ಸ್ವಾಗತ ಭಾಷಣ ಹಾಗೂ ಸಭೆಯ ಸೂಚನ ಪತ್ರ, ವಾರ್ಷಿಕ ವರದಿ ನ್ಯೂನತೆಗೆ ತಯಾರಿಸಲಾದ ಅನುಪಾಲನ ವರದಿ ಅಂದಾಜು ಬಜೆಟು ಮುಖ್ಯ ಕಾರ್ಯನಿರ್ವಾಣಾಧಿಕಾರಿ ಗಂಗಾಧರ ಇವರು ನೆರವೇರಿಸಿದರು,
ಸಂಘದ ಅಂದಾಜು ಬಜೆಟನ್ನು ಸಂಸ್ಥೆಯ ಸಿಬ್ಬಂದಿಯಾದ ದಿಲೀಪ್ ಖಾರ್ವಿ ರವರು ಓದಿ ಹೇಳಿದರು 2023-24 ನೇ ಸಾಲಿನ ಲೆಕ್ಕಪರಿಶೋಧಕರಾಗಿ ಜೀವನ್‌ ಕುಮಾ‌ರ್ ಶೆಟ್ಟಿ ಉಡುಪಿ ಇವರನ್ನು ನೇಮಕ ಮಾಡುವುದೆಂದು ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯಿಸಿಲಾಯಿತು . ನಮ್ಮ ಸಂಸ್ಥೆಯ ನಿರ್ದೇಶಕರಾದ ಜನಾರ್ಧನ್ ಕೆ ಎಂ ಇವರು ನಿರೂಪಣೆ ಮಾಡಿ ಅಧ್ಯಕ್ಷರ ಅನುಮತಿ ಮೇರೆಗೆ ಬರತಕ್ಕ ಇತರ ವಿಷಯಗಳನ್ನು ಸಭೆಯಲ್ಲಿ ಚರ್ಚಿಸಲಾಯಿತು, ಹಾಗೆ ನಿವೃತ್ತ ಅರುಣ್ ಕುಮಾರ್ ಎಸ್ ವಿ ಸಹಕಾರ ಉಪನಿಬಂಧಕರ ಕಚೇರಿ ಕುಂದಾಪುರ ಇವರನ್ನು ಮರವಂತೆ ಮೀನುಗಾರರ ಸಂಘದ ಪರವಾಗಿ ಸನ್ಮಾನಿಸಲಾಯಿತು.
ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರವೀಣ ಉಪಾಧ್ಯಕ್ಷರಾದ ರತ್ನಾಕರ ಖಾರ್ವಿ ಸದಸ್ಯರಾದ ಸುರೇಶ್,ಲೋಕೇಶ್ ಜನಾರ್ದನ ಕೆ ಎಂ, ಚಂದ್ರಶೇಖ‌ರ್ ಖಾರ್ವಿ, ನಾಗರಾಜ ಖಾರ್ವಿ,ಜಯಕೃಷ್ಣ ಸಂತೋಷ್ ಖಾರ್ವಿ ರಾಜೇಶ್ವರಿ ಭಾಗ್ಯ ಎಸ್, ಭಾಗ್ಯ ಆರ್ ಕೆ ಹಾಗು
ಸಿಬ್ಬಂಧಿ ವರ್ಗ ಉಪಸ್ಥಿತರಿದ್ದರು ಹಾಗೆಯೆ ಶ್ರೀ ರಾಮ ಸೇವಾ ಸಮಿತಿ ಅಧ್ಯಕ್ಷರಾದ ಸುರೇಶ ಖಾರ್ವಿ, ಶ್ರೀರಾಮ ಸೇವಾ ಸಮಿತಿಯ ಮಾರ್ಕೆಟಿಂಗ್ ಅಧ್ಯಕ್ಷರಾದ ಬಿ ವೆಂಕಟರಮಣ ಖಾರ್ವಿ ಯವರನ್ನು ಸನ್ಮಾನಿಸಿ, ಸಭೆಯಲ್ಲಿ ಮಾಜಿ ಅಧ್ಯಕ್ಷರಾದ ಚಂದ್ರ ಖಾರ್ವಿ, ಸೊಮಯ್ಯ ಖಾರ್ವಿ ಹಾಗು ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು

About The Author

Leave a Reply

Your email address will not be published. Required fields are marked *