ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಬೈಂದೂರು ;ಬೈಂದೂರು ತಾಲೂಕು ಮರವಂತೆ ಮೀನುಗಾರರು ಆಗಸ್ಟ್ 15ರಂದು ಸಾಮೂಹಿಕ ರಜೆಯನ್ನು ಘೊಷೀಸಿ ಇಂದು ವರಾಹ ದೇವಸ್ಥಾನದಲ್ಲಿ ಮತ್ಸ್ಯ ಕ್ಷಾಮದ ಬಗ್ಗೆ ಸಾಮುಹಿಕ ಪ್ರಾರ್ಥನೆ ಸಲ್ಲಿಸಿದರು, ಶ್ರೀರಾಮ ಸೇವಾ ಸಮಿತಿಯ ಅಧ್ಯಕ್ಷರಾದ ಸುರೇಶ್ ಖಾರ್ವಿಯವರ ಸಮ್ಮುಖದಲ್ಲಿ ಇಂದು ವರಾಹ ದೇವರ ಸನ್ನಿದಾನದಲ್ಲಿ ಅಭಾರಿ ಸೇವೆ, ವಿಷ್ಣು ದೇವರಿಗೆ ಮೀನಿನ ಸರ, ಗಂಗಾಧರೇಶ್ವರ ಸ್ವಾಮಿಗೆ ಶತರುದ್ರಾಭಿಷೇಕ, ಎಂಬ ಹರಕೆಯನ್ನು ಹೇಳಿಕೊಂಡಿದ್ದು, ಮುಂದಿನ ದಿನಗಳಲ್ಲಿ ನಿನ್ನ ಸ್ಥಾನದಲ್ಲಿ ಮೀನುಗಳು ಬಂದು ಎಲ್ಲಾ ಮೀನುಗಾರರಿಗೆ ಮೀನುಗಳು ಸಿಗಲಿ ಎಂಬ ಹರೆಕೆಯನ್ನು ಹೇಳಿಕೊಂಡ್ಡಿದ್ದು ಸಮುದ್ರ ರಾಜನಿಗೆ ಪ್ರಾಸಾದವನ್ನು ಅರ್ಪಿಸಿದರುಶ್ರೀ ರಾಮ ಮಂದಿರದ ಅಧ್ಯಕ್ಷರಾದ ಸುರೇಶ್ ಖಾರ್ವಿ ಮಾತನ್ನಾಡಿ ಹಿಂದಿನ ಕಾಲದಲ್ಲಿ ನಮ್ಮ ಪೂರ್ವಜರು ವರಾಹ ದೇವಸ್ಥಾನದಲ್ಲಿ ಕೈ ಮುಗಿದರೆ ಮಾರನೆಯದಿನ ಮೀನುಗಳು ಬರುತ್ತಿತ್ತು , ಈ ವರ್ಷದ ಆರಂಭಿಕ ಮೀನುಗಾರಿಕೆಯಲ್ಲಿ ನಾಡದೋಣಿ ಮೀನುಗಾರರು ಬಾರಿ ಹೋಡೇತ ಕಂಡಿದ್ದು, ಒಂದು ತಿಂಗಳು ಲೇಟ್ ಆಗಿ ಮೀನುಗಾರಿಕೆ ಆರಂಭವಾದರು ಮೀನುಗಳು ಬಾರಿ ಕುಸಿತ ಕಂಡಿದೆ ಲೈಟ್ ಪೀಶೀಂಗ್, ಬುಲ್ ಟ್ರಾಲ್ನಿಂದ ಮರಿ ಮೀನುಗಳ ಸಂತತಿ ನಶಿಸಿ ಹೋಗುತ್ತಿದ್ದು ಮುಂದಿನ ದಿನಗಳಲ್ಲಿ ಮೀನುಗಾರರ ಬದುಕು ತುಂಬಾ ಕಷ್ಟಕರ ವಾಗಿದೆ ಇನ್ನಾದರು ಸರ್ಕಾರ ಎಚ್ಚೆತ್ತು ಕೊಂಡು ಲೈಟ್ ಪೀಶೀಂಗ್ ಮತ್ತು ಬುಲ್ ಟ್ರಾಲ್ ನಿಷೇದಿಸಿದರೆಮೀನುಗಾರರು ಬದುಕಲು ಸಾಧ್ಯ ವರಾಹ ದೇವಸ್ಥಾನದ ಧರ್ಮದರ್ಶಿರಾದ ಶ್ರೀ ಸತ್ತೀಶ್ ನಾಯ್ಕ್, ಶ್ರೀರಾಮ ಮಂದಿರದ ಮೀನುಗಾರ ಸೇವಾ ಸಮಿತಿಯ ಅಧ್ಯಕ್ಷರಾದ ಶ್ರೀ ಸುರೇಶ್ ಖಾರ್ವಿ, ಮಾರ್ಕೆಟ್ ಸಮಿತಿಯ ಅಧ್ಯಕ್ಷರಾದ ಶ್ರೀ ವೆಂಕಟರಮಣ ಖಾರ್ವಿ, ಮಾಜಿ ಅಧ್ಯಕ್ಷರಾದ ಪಿ ಚಂದ್ರ, ಸೊಮಯ್ಯ ಖಾರ್ವಿ, ವಾಸುದೇವ ಖಾರ್ವಿ, ಶಂಕರ್ ಖಾರ್ವಿ, ಮೊಹನ್ ಖಾರ್ವಿ, ಉಪಾಧ್ಯಕ್ಷರಾದ ನಾರಾಯಣ ಖಾರ್ವಿ ಕಾರ್ಯದರ್ಶಿ ಯಾದ ಶೇಖರ್ ಖಾರ್ವಿ,ಸತ್ತೀಶ್ ಕೆ ಎಂ, ಲಕ್ಷ್ಮಣ್ ಖಾರ್ವಿ ಈಶ್ವರ್ ಖಾರ್ವಿ ದೋಣಿಯ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು ಸಾರಥ್ಯದಲ್ಲಿ ಸಾಗರ ನ್ಯೂಸ್ ಜನಾರ್ದನ ಕೆ ಎಂ ಮರವಂತೆ