ಉಡುಪಿ ಸೆ.14: ಹಿರಿಯಡ್ಕ ಪೆರ್ಡೂರಿನ ಮುಖ್ಯ ರಸ್ತೆಯಲ್ಲಿ ತಡರಾತ್ರಿ ಮಾನಸಿಕ ಖಿನ್ನತೆಯ ವ್ಯಕ್ತಿ ಬಿದ್ದುಕೊಂಡಿದ್ದು ವಿಷಯ ತಿಳಿದ ವಿಶು ಶೆಟ್ಟಿ ಅಂಬಲಪಾಡಿ ಪೆರ್ಡೂರಿನ ಯುವಕರ ಸಹಾಯದಿಂದ ರಕ್ಷಿಸಿ, ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದ ಘಟನೆ ನಡೆದಿದೆರಕ್ಷಿಸಲ್ಪಟ್ಟ ವ್ಯಕ್ತಿ ತಮಿಳುನಾಡು ಮೂಲದ ಅರ್ಜುನ್ (45) ಹೆಚ್ಚಿನ ವಿವರ ತಿಳಿದು ಬಂದಿಲ್ಲ. ಕಾರ್ಮಿಕರಾಗಿ ಬಂದಿರುವ ಬಗ್ಗೆ ಮೇಲ್ನೋಟಕ್ಕೆ ಕಾಣುತ್ತದೆ. ರಾತ್ರಿ ರಕ್ಷಣೆ ಮಾಡಿರುವುದರಿಂದ ಸಂಭಾವ್ಯ ಅಪಘಾತದ ಅನಾಹುತ ತಪ್ಪಿದೆ. ರಕ್ಷಣಾ ಕಾರ್ಯದಲ್ಲಿ ಪೆರ್ಡೂರಿನ ಯುವಕರಾದ ಸುನಿಲ್ ಶೆಟ್ಟಿ, ತುಶಾರ್, ಅಶ್ವಿತ್, ರಿಕ್ಷಾ ಸುರೇಶ್, ರಾಮದಾಸ್ ಪಾಲನ್ ಉದ್ಯಾವರ ಹಾಗೂ ಹುಸೇನ್ ಸಹಕರಿಸಿದ್ದಾರೆ.ಸಂಬಂಧಪಟ್ಟವರು ಮಂಜೇಶ್ವರದ ಸ್ನೇಹಾಲಯ ಸಂಪರ್ಕಿಸುವಂತೆ ವಿಶು ಶೆಟ್ಟಿ ವಿನಂತಿಸಿದ್ದಾರೆ. ಈ ಬಗ್ಗೆ ಹಿರಿಯಡ್ಕ ಠಾಣೆಗೆ ಮಾಹಿತಿ ನೀಡಲಾಗಿದೆ. ರಕ್ಷಣಾ ಕಾರ್ಯ ತಡರಾತ್ರಿ ಆಗಿರುವುದರಿಂದ ರಾತ್ರಿ ಕಳೆಯಲು ವ್ಯಕ್ತಿಗೆ ಕೊಳಲಗಿರಿಯ ಸ್ವರ್ಗ ಆಶ್ರಮ ನೆರವಾಗಿದೆ.