ಶ್ರೀರಾಮ ಕನ್ನಡ ಖಾರ್ವಿ ಸೇವಾ ಸಮಿತಿ ಮಾರ್ಕೆಟ್ ವಿಭಾಗ ವಾರ್ಷಿಕ ಮಹಾಸಭೆ
ಬೈಂದೂರು; ಬೈಂದೂರು ತಾಲೂಕು ಮರವಂತೆ ಶ್ರೀರಾಮ ಕನ್ನಡ ಖಾರ್ವಿ ಸೇವಾ ಸಮಿತಿ ಮಾರ್ಕೆಟ್ ವಿಭಾಗ ವಾರ್ಷಿಕ ಮಹಾಸಭೆ ಶ್ರೀರಾಮ ಮಂದಿರದ ವಠಾರದಲ್ಲಿ ನಡೆಯಿತು,ಇದರ ಅಧ್ಯಕ್ಷತೆಯನ್ನು ಶ್ರೀರಾಮ ಮಂದಿರದ ಸೇವಾ ಸಮಿತಿಯ ನೂತನ ಅಧ್ಯಕ್ಷರಾದ ಬಿ ಸುರೇಶ್ ಖಾರ್ವಿ ಮತ್ತು ಮಾರ್ಕೆಟ್ ಸಮಿತಿಯ ಅಧ್ಯಕ್ಷರಾದ ಶಂಕರ್ ಎಮ್ ಖಾರ್ವಿ ಉಪಸ್ಥಿತಿಯಲ್ಲಿ ನಡೆಯಿತು, ಶಾಲಾ ವಿದ್ಯಾರ್ಥಿಗಳಿಂದ ಪ್ರಾರ್ಥನೆ ಮಾಡಲಾಯಿತು.
ಸಭೆಯಲ್ಲಿ ದೋಣಿಯ ಎಲ್ಲಾ ಸದಸ್ಯರ ಮಕ್ಕಳಿಗೆ ಅತ್ಯಂತ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಮತ್ತು ಸನ್ಮಾನ ಮಾಡಿ, ಸಭೆಯಲ್ಲಿ ಗೌರವಿಸಲಾಯಿತು.ಸಭೆಯಲ್ಲಿ ವಾರ್ಷಿಕ ಆಯವ್ಯಯ ಮಂಡನೆಯನ್ನು ಲಕ್ಷ್ಮಣ ಖಾರ್ವಿ ಮಂಡನೆ ಮಾಡಿದರು, ಅಧ್ಯಕ್ಷರು ಮತ್ತು ಸರ್ವ ಸದಸ್ಯರ ಮೆರೆಗೆ ಸಭೆಯಲ್ಲಿ ವಿಧ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹೆಚ್ಚಳ ಮಾಡಲು ಸಭೆಯಲ್ಲಿ ಮಂಡನೆ ಮಾಡಲಾಯಿತು, ಮತ್ತು ಕೆಲವು ವಿಷಯಗಳು ಸಭೆಯಲ್ಲಿ ಚರ್ಚೆಸಿ ಸಂಸ್ಥೆಯ ಅಬಿವೃದ್ದಿಯ ಬಗ್ಗೆ ಮಾತನ್ನಾಡಿದರು ಸಭೆಯಲ್ಲಿ ಮಾರ್ಕೆಟ್ ಸಮಿತಿಯ ನೂತನ ಅಧ್ಯಕ್ಷರಾಗಿ ಬಿ ವೆಂಕಟರಮಣ ಖಾರ್ವಿ ಮತ್ತು ಇತರ ಸದಸ್ಯರನ್ನು ನೇಮಕ ಮಾಡಲಾಗಿದ್ದು ಶ್ರೀರಾಮ ಮೀನುಗಾರ ಸೇವಾ ಸಮಿತಿಯ ಮಾಜಿ ಅಧ್ಯಕ್ಷರಾದ ವಾಸುದೇವ ಖಾರ್ವಿ ಮತ್ತು ಈಶ್ವರ್ ಖಾರ್ವಿಯವರನ್ನು ಸನ್ಮಾನಿಸಿ ಗೌರವಿಸಿ ಬೀಳ್ಕೊಡಲಾಯಿತು.ಸತ್ತೀಶ್ ಕೆ ಎಂ ನಿರೂಪಣೆಯನ್ನು ಮಾಡಿ, ಲಕ್ಷ್ಮಣ್ ಖಾರ್ವಿ ಅಭಿನಂದನೆ ಸಲ್ಲಿಸಿದ್ದರು. ಸಭೆಯಲ್ಲಿ ನೂತನ ಅಧ್ಯಕ್ಷರಾದ ಸುರೇಶ್ ಖಾರ್ವಿ ಮಾರ್ಕೆಟ್ ಸಮಿತಿಯ ಅಧ್ಯಕ್ಷರಾದ ಶಂಕರ್ ಮ್ ಖಾರ್ವಿ, ಸೋಮಯ್ಯ ಖಾರ್ವಿ, ರತ್ನಾಕರ್, ವಾಸುದೇವ ಖಾರ್ವಿ, ಮೋಹನ್ ಖಾರ್ವಿ, ಮತ್ತು ಇತರ ಸದಸ್ಯರು ಉಪಸ್ಥಿತರಿದ್ದರು