ಬೈಂದೂರು: ತ್ರಾಸಿ ಮರವಂತೆ ಬೀಚಿನಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ:
ಬೈಂದೂರು : ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆ ಎರಡು ದಿನಗಳಿಂದ ಮಳೆ ಕಡಿಮೆಯಾದ ಹಿನ್ನೆಲೆಯಲ್ಲಿ ಹಾಗೂ ವೀಕೆಂಡ್ ರಜೆ ಹಾಗೂ ಬಕ್ರೀದ್ ರಜೆ ನಿರಂತರ ಮೂರು ದಿನ ಇರುವುದರಿಂದ ತ್ರಾಸಿ ಮರವಂತೆ ಬೀಚಿನಲ್ಲಿ ಪ್ರವಾಸಿಗರ ಮೋಜು -ಮಸ್ತಿ ರಾಜ್ಯ ಹಾಗೂ ಹೊರ ರಾಜ್ಯಗಳಿಂದ ತ್ರಾಸಿ ಮರವಂತೆ ಬೀಚ್ಚಲ್ಲಿ ಇಂದು ಬೆಳಗಿನಿಂದ ಸಂಜೆಯ ತನಕ ಪ್ರವಾಸಿಗರು ಹೆಚ್ಚಾಗಿದ್ದು ಮಳೆಗಾಲದ ಸಮಯ ಆದ್ರಿಂದ ಜಿಲ್ಲಾಡಳಿತ ಪ್ರವಾಸಿಗರು ಸಮುದ್ರಕ್ಕೆ ಇಳಿಯದಂತೆ ಮುಂಜಾಗ್ರತ ಕ್ರಮ ಕೈಗೊಂಡಿದ್ದು ಪ್ರವಾಸಿಗರನ್ನು ನಿಯಂತ್ರಿಸಲು ತ್ರಾಸಿ ಮರವಂತೆ ಬೀಟ್ನಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜಿಸಲಾಗಿದೆಸ್ಥಳದಲ್ಲಿ ಗುಂಗೊಳ್ಳಿ ಪೊಲೀಸ್ ಠಾಣಾ ಸಿಬ್ಬಂದಿ, ಗಂಗೊಳ್ಳಿ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಟೂರಿಸಂ ಸಿಬ್ಬಂದಿ, ಮತ್ತು ಕರಾವಳಿ ನಿಯಂತ್ರಣ ದಳ, ಲೈಫ್ ಗಾರ್ಡ್, ಹೋಂ ಗಾರ್ಡ್, ಸ್ಥಳದಲ್ಲಿ ಮುಕುಂ ಹೂಡಿದ್ದಾರೆ