ನಿರಂತರ ಸುರಿಯುತ್ತಿರುವ ವರುಣನ ಆರ್ಭಟಕ್ಕೆ ತತ್ತರಿಸಿದ ವಾಸುದೇವ ಮೊಗವೀರ ಕುಟುಂಬ
ಬೈಂದೂರು ತಾಲೂಕು ಉಪ್ಪುಂದ ಗ್ರಾಮದ ವಾಸುದೇವ ಮೋಗವೀರರವರ ಮನೆಗೆ ಮಳೆ ನೀರು ನುಗ್ಗಿದ ಕಾರಣ ಇಡಿ ಕುಟುಂಬವೇ ಭಯದ ವಾತಾವರಣದಲ್ಲಿ ಬದುಕುವ ಸ್ಥಿತಿ ಬಂದಿದೆ. ವಾಸುದೇವ ಮೊಗವೀರರವರ ಮನೆ ಹತ್ತಿರ ನೀರು ಹೋಗುವ ಚರಂಡಿ ಇದ್ದು ಸಮರ್ಪಕವಾಗಿ ನೀರು ಹೋಗದ ಕಾರಣ ಮತ್ತು ಇವರ ಜಾಗ ತಗ್ಗು ಪ್ರದೇಶಗಳಾಗಿರುವುದರಿಂದ ಚರಂಡಿ ನೀರು ಇವರ ಹಿತ್ತಲೆಗೆ ನುಗ್ಗಿ ಮನೆಯ ಚಾವಡಿಯ ತನಕ ನೀರು ತುಂಬಿಕೊಂಡಿರುತ್ತದೆ, ಈಗಾಗಲೇಪಂಪ್ಸೆಟ್ ಬಳಕೆಯನ್ನು ಮಾಡಿದ್ದು ಧಾರಾಕಾರವಾಗಿ ಸುರಿತ್ತಿರುವ ಮಳೆಯಿಂದ ತತ್ತರಿಸಿದ ವಾಸುದೇವ ಮನೆಯವರು ಮನೆ ಬಿದ್ದು ಹೋಗೋ ಪರಿಸ್ಥಿತಿ ಉಂಟಾಗಿದ್ದು ಹಗಲು ರಾತ್ರಿ ಎನ್ನದೆ
ನಿರಂತರ ಸುರಿಯುತ್ತಿರುವ ಮಳೆಯಿಂದ ಮತ್ತು ವಿದ್ಯುತ್ ಇಲ್ಲದೆ ಇರೋದ್ರಿಂದ ನೀರು ಖಾಲಿ ಮಾಡಲು ಸಾಧ್ಯವಾಗುತ್ತಿಲ್ಲ ಹಲವು ವರ್ಷದಿಂದ ಈ ಸಮಸ್ಯೆ ಇದ್ದರೂ ಬಗೆಹರಿಸಲು ಆಗದೆ ಇರುವುದು.
ಈಗಾಗಲೇ ಗ್ರಾಮ ಪಂಚಾಯತ್ ಅಧಿಕಾರಿಗಳಿಗೂ ಮತ್ತು ತಾಲೂಕು ಅಧಿಕಾರಿಗಳಿಗೂ ತಿಳಿಸಿದರು ಏನು ಪ್ರಯೋಜನವಾಗದೆ ಇರುವುದರಿಂದ ಕೂಡಲೇ ಸ್ಥಳಕ್ಕೆ ಮಾನ್ಯ ಜಿಲ್ಲಾಧಿಕಾರಿ ಯವರು ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿ ಅವರ ಮನೆಯನ್ನು ಉಳಿಸಿಕೊಡಿ ಎಂದು ಮನವಿ ಮಾಡಿಕೊಂಡಿರುತ್ತಾರೆ.