ಬೈಂದೂರು ತಾಲೂಕು ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ (ರಿ.) ಉಪ್ಪುಂದ ಇವರಿಂದ 2024-25 ನೇ ಸಾಲಿನ ಮೀನುಗಾರಿಕಾ ಋತುವಿನ ಸಮುದ್ರ ಪೂಜೆಯನ್ನು ಪುರೋಹಿತರಾದ ಪರಮೇಶ್ವರ ಹೆಗಡೆ ಇವರ ನೇತೃತ್ವದಲ್ಲಿ ಉಪ್ಪುಂದ ಸಮುದ್ರ ತೀರದಲ್ಲಿ ನೆರವೇರಿಸಲಾಯಿತು.ಇದೇ ಸಂದರ್ಭ ಸಂಘದ ಅಧ್ಯಕ್ಷರಾದ ವೆಂಕಟರಮಣ ಖಾರ್ವಿ, ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಅರಮಕೋಡಿ ಶ್ರೀ ಈಶ್ವರ ದೇವಸ್ಥಾನದ ಅಧ್ಯಕ್ಷರಾದ ಸುರೇಶ್ ಖಾರ್ವಿ, ಬೈಂದೂರು ವಲಯ ನಾಡದೋಣಿ ಮೀನುಗಾರರ ಸಂಘದ ಅಧ್ಯಕ್ಷರಾದ ಬಿ.ನಾಗೇಶ ಖಾರ್ವಿ, ಮತ್ತು ಸಂಘದ ಪದಾಧಿಕಾರಿಗಳು, ಮೀನುಗಾರ ಮುಖಂಡರು ಸಂಘದ ರಾಣಿಬಲೆ ಜೋಡಿಯ ಸದಸ್ಯರು, ಹಾಗೂ ಮೀನುಗಾರರು ಉಪಸ್ಥಿತರಿದ್ದರು.