ಸಮಾಜದ ನೆರವಿಗಾಗಿ ಹಾತೊರೆಯುತ್ತಿರುವ ಅಸಹಾಯಕ ಸಹೋದರಿಯರು: ತುರ್ತು ಸ್ಪಂದನೆಗೆ ಮನವಿ.

ಪುತ್ತೂರು ; ಪುತ್ತೂರು ಮಡಾವು ಊರಿನ ಬಂಟ ಮನೆತನದ ಪ್ರತಿಷ್ಠಿತ ಕುಟುಂಬವೊಂದು ತೀರಾ ಅಸಹಾಯಕ ಪರಿಸ್ಥಿತಿಯಲ್ಲಿದ್ದು, ಸಮಾಜದ ದಾನಿಗಳ ನೆರವನ್ನು ಯಾಚಿಸುತ್ತಿದೆ. ತಂದೆಯ ನಿರ್ಲಕ್ಷ್ಯ, ಮಾನಸಿಕ ಅಸ್ವಸ್ಥೆಯಾಗಿರುವ ತಾಯಿ ಹಾಗೂ ಅನಾರೋಗ್ಯದಿಂದ ಹಾಸಿಗೆ ಹಿಡಿದಿರುವ ತಂಗಿ ಒಂದೆಡೆಯಾದರೆ, ಇವರೀರ್ವರ ಸೇವೆಗೆ ಕೆಲಸ ಬಿಟ್ಟು ನಿಂತಿರುವ ಅಕ್ಕ ಯಾವುದೇ ಆದಾಯವಿಲ್ಲದೆ ಅಕ್ಷರಶ: ಕಂಗಾಲಾಗಿದ್ದಾಳೆ.  ದ.ಕ. ಜಿಲ್ಲೆಯ ಪುತ್ತೂರಿನ ಮಡಾವು ಊರಿನ ನೊಂದ ಕುಟುಂಬದ ದುರಂತ ಕಥೆಯಿದು. ಈ ಕುಟುಂಬಕ್ಕೆ ಸ್ಪಂದಿಸಿದ ಸಮಾಜ ಸೇವಕ ವಿಶು ಶೆಟ್ಟಿ ಅವರು ಕಳೆದ ಎರಡು ವರ್ಷಗಳ ಹಿಂದೆ ಕುಟುಂಬದ ನೋವಿಗೆ ಸ್ಪಂದಿಸಿ ಸಹಾಯ ಹಸ್ತ ಚಾಚಿದ್ದಾರೆ. ಈ ಕುಟುಂಬ ದುರಂತದ ಅಂಚಿಗೆ ತಲುಪದಂತೆ ಸಮಾಜದ ದಾನಿಗಳ ತುರ್ತು ನೆರವಿನ ಅಗತ್ಯವಿದೆ.

ಏನಿದು ಸಮಸ್ಯೆ? : ಈ ಕುಟುಂಬದಲ್ಲಿ ಅಕ್ಕ ಗೀತಾ ರೈ (29) ಹಾಗೂ ತಂಗಿ ನೀತಾ ರೈ(27) ಇಬ್ಬರೂ ಬಿಎಸ್‌ಸಿ ಪದವೀಧರರಾಗಿದ್ದಾರೆ. ತಂಗಿ ನೀತಾ ರೈ ಅನಾರೋಗ್ಯದಿಂದ ಕಳೆದ 7 ವರ್ಷಗಳಿಂದ ನಿಂತು ನಡೆಯಲಾಗದೆ ಹಾಸಿಗೆ ಹಿಡಿದರೆ, ತಾಯಿ ಕೂಡಾ ಮಾನಸಿಕ ಅಸ್ವಸ್ಥತೆಗೆ ಒಳಗಾಗಿರುವ ಕುಟುಂಬವನ್ನು ಇನ್ನಷ್ಟು ಸಂಕಷ್ಟಕ್ಕೀಡು ಮಾಡಿದೆ. ಹುಟ್ಟಿಸಿದ ಅಪ್ಪ ಎಂದೋ ತನ್ನ ಜವಾಬ್ದಾರಿಯನ್ನು ಮರೆತು ಬಿಟ್ಟಿದ್ದಾರೆ!

ಅಕ್ಕ ಗೀತಾ ರೈ ಕಾಲೇಜು ದಿನಗಳಿಂದ ಕೆಲಸ ಮಾಡುತ್ತಿದ್ದು ತದನಂತರ ಖಾಸಗಿ ಕಂಪನಿಯಲ್ಲಿ ಸುಮಾರು 7 ವರ್ಷಗಳ ಕಾಲ ಕೆಲಸ ಮಾಡಿ ಆ ಸಂಪಾದನೆಯ ಲಕ್ಷಾಂತರ ಹಣವನ್ನು ಕೂಡಾ ಸಹೋದರಿಯ ಚಿಕಿತ್ಸೆಗೆ ಖರ್ಚು ಮಾಡಿದ್ದು ಇದೀಗ ಉಳಿತಾಯ ಏನೂ ಇಲ್ಲದಂತಾಗಿದೆ. ಆದರೆ ತಾಯಿ ಮತ್ತು ತಂಗಿಯ ಅನಾರೋಗ್ಯ ಕಾರಣದಿಂದಾಗಿ ಕೆಲಸ ಬಿಟ್ಟು ಸೇವೆಗೆ ನಿಂತಿದ್ದಾರೆ. ಚಿಕಿತ್ಸೆ ಹಾಗೂ ಉದರ ಪೋಷಣೆಗೆ ಬಿಡಿಕಾಸು ಇಲ್ಲದೆ ಕಂಗಾಲಾಗಿದ್ದಾರೆ. ಸಮಾಜದ ದಾನಿಗಳ ನೆರವು ಯಾಚಿಸುತಿದ್ದಾರೆ.

ಸ ಈ ಕುಟುಂಬಕ್ಕೆ ಸಹಾಯ ಮಾಡಲಿಚ್ಚಿಸುವ ಮಂದಿ ಗೀತಾ ರೈ, ಕೆನರಾ ಬ್ಯಾಂಕ್ ಪುತ್ತೂರು ಶಾಖೆ, ಸೇವಿಂಗ್ಸ್ ಅಕೌಂಟ್ ನಂ. 02082210006898, 3 CNRB0010134 ಅಥವಾ ಗೀತಾ ರೈ ಅವರ ಮೊಬೈಲ್ ನಂಬರ್ 9886713260 ಗೆ ಗೂಗಲ್ ಪೇ ಫೋನ್ ಫೆ ಮಾಡಬಹುದು.

About Janardhana K M

Check Also

ಮಲ್ಪೆ: ಕಡಲು ಪ್ರಕ್ಷುಬ್ಧ- ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವು

ಬೈಂದೂರು;ಮಲ್ಪೆ ನಾಡ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ಇಂದು ಸಂಭವಿಸಿದೆ.ಪಿತ್ರೋಡಿ …

Leave a Reply

Your email address will not be published. Required fields are marked *