ಇದ್ದು ಇಲ್ಲಾದಂತಾದ ಮರವಂತೆ ಗ್ರಾಮ ಪಂಚಾಯತ್ ಬೈಂದೂರು ತಾಲೂಕು ಮರವಂತೆ ಜಕ್ಕನ್ಮಟ್ಟೆಯ ರೋಡ್ ಅನಾದಿಕಾಲದಿಂದಲೂ ಇದ್ದ ರಸ್ತೆ ಎಲ್ಲಾ ರಸ್ತೆಗೂ ಸಂಪರ್ಕ ಕಲ್ಪಿಸುವ ರಸ್ತೆ ಆಗಿರುತ್ತದೆ ಆದರೇ ಇನ್ನೂ ಕಾಂಕ್ರಟ್ ನ್ನು ಕಾಣದ ರಸ್ತೆ, ನೀರು ಹರಿದು ರಸ್ತೆಯ ಪಕ್ಕದಲ್ಲಿ ದೋಡ್ಡ ಕಣಿವೆ ಬಿದ್ದು ಬೈಕ್ ಸವಾರರಿಗೂ ವಾಹನ ಸಂಚಾರ ತುಂಬಾ ಕಷ್ಟಕರ ವಾಗಿದ್ದು, ಈಗಾಗಲೇ ಅಧ್ಯಕ್ಷರು ಅಧಿಕಾರಿಗಳ ಮತ್ತು ಸದಸ್ಯರ ಗಮನಕ್ಕೆ ತಂದರೆ ಎನು ತಲೆ ಕೆಡಿಸಿಕೊಳ್ಳದ ಈ ಗ್ರಾಮ ಪಂಚಾಯತ್ ಬಗ್ಗೆ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ, ದೂರು ನೀಡಲು ಬಂದವರಿಗೆ ಬಂಡವಾಳ ಇಲ್ಲಾ ಎನ್ನುವ ನೆಪವೊಡ್ಡಿ ಜನರನ್ನು ತಪ್ಪು ದಾರಿಗೆ ಇಳಿಸುತ್ತಿದ್ದಾರೆ, ಹಾಗಾದರೆ ಯಾವ ಗ್ರಾಮ ಪಂಚಾಯತ್ ನಲ್ಲೂ ಇಲ್ಲದ ಶುಲ್ಕ ಈ ಗ್ರಾಮ ಪಂಚಾಯತ್ ನಲ್ಲಿ ದುಬಾರಿ ಶುಲ್ಕ ಯಾಕೇ? ಇದನ್ನು ಕೇಳಿದರೆ ಅಬಿವೃದ್ದಿ ಹೆಸರು ಹೇಳುತ್ತಾರೆ ಕೇವಲ ಒಂದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಈ ಗ್ರಾಮ ಪಂಚಾಯತ್ ಒಂದು ಮಾದರಿ ಗ್ರಾಮ ಪಂಚಾಯತ್ ಆಗಿ ಹೆಸರು ಗಳಿಸಿದ್ದು ಈಗ ಅಧೋಗತಿಗೆ ಹೋಗುತ್ತಾರುವುದು ನಮ್ಮೆಲ್ಲರ ದುರದೃಷ್ಟಕರ, ಬಗೆ ಹರಿಸಲು ಆಗದ ಈ ಪಂಚಾಯತ್ ನಮಗೆ ಬೇಕಾ ? ಗ್ರಾಮ ಪಂಚಾಯತ್ ಮುಂದುಗಡೆ ಮತ್ತು ಹಿಂದೆಗಡೆ ಕಸದ ರಾಶಿ ನೋಡಿದರೆ ಮತ್ತೆನು ಹೇಳುವುದು ಬೇಡ, ಇವರ ಕಣ್ಣುಮುಂದೆನೇ ಇದೆ, ರಸ್ತೆಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ಇಲ್ಲಾ, ಇದ್ದರೂ ಹೂಳೆತ್ತವುದಿಲ್ಲಾ, ಕೆಲವು ಕಡೆ ಮಣ್ಣು ತೆಗೆದರು ಅಲ್ಲೆ ಬಿಟ್ಟಿರುತ್ತಾರೆ, ರಸ್ತೆಯ ಮೇಲೆ ಮೊಳಕಾಲು ನೀರು ನಿಂತು ಶಾಲಾ ವಿದ್ಯಾರ್ಥಿಗಳಿಂದ ತುಂಬಾ ತೊಂದರೆಯಾಗುತ್ತಿದೆ, ಗಮನಕ್ಕೆ ತಂದರು ಸರಿಪಡಿಸಲು ಆಗಿಲ್ಲ ಎಂದು ಇಲ್ಲದ ಈ ಗ್ರಾಮ ಪಂಚಾಯತ್ ಇಂದಾಕೆ ಈ ದುಸ್ಥಿತಿ. ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ಮಾಡಬೇಕೆಂದು ಸಾರ್ವಜನಿಕರ ಮನವಿ ವರದಿ; ಜನಾರ್ದನ ಮರವಂತೆ