

ವರ್ಷಂಪ್ರತಿ ನಡೆಯುವ ಈ ಸೇವೆಯಲ್ಲಿ ಪ್ರತಿ ವರ್ಷವೂ ಸೇವೆ ನೀಡುತ್ತಿರುವ ಸೇವಾರ್ಥಿಗಳು ತಮ್ಮ ಅನುಕೂಲದ ದಿನವನ್ನು ನೊಂದಾಯಿಸಿಕೊಂಡು ಹಾಗೂ ಹೊಸದಾಗಿ ಯಾರಾದರೂ ಸೇವೆ ನೀಡಲು ಇಚ್ಚಿಸಿದಲ್ಲಿ ತಮ್ಮ ಅನುಕೂಲದ ದಿನಾಂಕವನ್ನು ತಿಳಿಸಬೇಕಾಗಿ ಕೇಳಿಕೊಳ್ಳುತ್ತೇವೆ.
ಪ್ರತಿ ವರ್ಷದ ಹಾಗೆ ಈ ವರ್ಷವೂ 1000 ರೂಪಾಯಿ ಯನ್ನು ನಿಗದಿಪಡಿಸಿದ್ದೇವೆ. ಒಂದು ದಿನಕ್ಕೆ ಮೂರ ಕ್ಕಿಂತ ಜಾಸ್ತಿ ಪೂಜೆ ಮಾಡಲು ಸಾದ್ಯವಾಗುವುದಿಲ್ಲ,ಕೆಲವರು ಹೆಚ್ಚಿಗೆ ಶುಕ್ರವಾರ ಕೇಳುತ್ತಾರೆ. ಹಾಗಾಗಿ ಯಾರು ಮೊದಲು ನೋದಾಯಿಸುತ್ತಾರೋ ಅವರಿಗೆ ಅವಕಾಶ ಸಿಗುತ್ತದೆ.
ಸಂಜೆ 6 ಗಂಟೆ ಇಂದ ಪೂಜೆ ಪ್ರಾರಂಭವಾಗುತ್ತದೆ. ಸೋಣೆ ಆರತಿ ಸೇವೆ ಅನ್ನುವುದು ನಮ್ಮ ಬಾಗದಲ್ಲಿ ತಲೆ ತಲಾಂತರಗಳಿಂದ ನಡೆದು ಕೊಂಡು ಬಂದಂತಹ ಒಂದು ಪೂಜೆ.ಇದಕ್ಕೆ ತುಂಬಾ ಮಹತ್ವವಿದೆ.ಈ ಒಂದು ತಿಂಗಳು ದೇವರಿಗೆ ವಿಶೇಷವಾದ ಮಾಷ ವಾಗಿರುತ್ತದೆ.ಸಂಜೆ ದೇವರಿಗೆ ಅಭಿಷೇಕ,ಅಲಂಕಾರ,ನೈವೇದ್ಯ,ಒಂದು, ಮೂರು, ಐದು, ಎಳು, ಹತ್ತು ಈ ತರಹ ವಿಶೇಷ ಆರತಿಗಳು,ಇದೆಲ್ಲ ನೋಡುವುದೇ ಒಂದು ಸೌಬಾಗ್ಯ.ಹಾಗಾಗಿ ತಾವೆಲ್ಲರೂ ಈ ಸೇವೆಯಲ್ಲಿ ಹೆಚ್ಚೆಚ್ಚು ಪಾಲ್ಗೊಳ್ಳಿ ಎಂದು ಕೇಳಿಕೊಳ್ಳುತ್ತೇವೆ