
ದೇಶ, ವಿದೇಶಿಗರನ್ನು ತನ್ನತ್ತ ಸೆಳೆಯುವ ಸುಪ್ರಸಿದ್ದ ಪ್ರವಾಸಿ ತಾಣ. ದಿನನಿತ್ಯ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಆದರೆ ಇಲ್ಲಿನ ಕಡಲತೀರಕ್ಕೆ ಆಗಮಿಸುವ ಪ್ರವಾಸಿಗರು ಮೋಜು ಮಸ್ತಿ, ಮಾಡಿ ತೋರುವ ಮೂಲಕ ಸ್ಥಳೀಯ ವಾತಾವರಣವನ್ನು ಕೆಡಿಸುತ್ತಿದ್ದಾರೆ. ಎಚ್ಚರಿಕೆ ಮೀರಿ, ಕಡಲಿಗೆ ಇಳಿದು ಜೀವಕ್ಕೂ ಅಪಾಯ ತಂದಿಕೊಳ್ಳುತ್ತಿದ್ದಾರೆ.
ಆದರೇ ಗೋಕರ್ಣದ ಪೋಲಿಸ್ ರಾಜು ಮೋಜು ಮಸ್ತಿ ಮಾಡುವರಿಗೆ ಕಸ ತಗೆಯುವ ಹೊಸ ಶಿಕ್ಷೆಯನ್ನು ನಿಡಿದ್ದಾರೆ,
ಗೋಕರ್ಣದ ಮುಖ್ಯ ಕಡಲ ತೀರದದಲ್ಲಿ ಬೆಂಗಳೂರಿನ ಶಾಂತಿಧಾಮ ಕಾಲೇಜಿನ ಕೆಲವು ವಿದ್ಯಾರ್ಥಿಗಳು ಕಡಲ ತೀರದಲ್ಲಿ ಧೂಮಪಾನ ಮಾಡಿ ಅತೀರೇಕದ ವರ್ತನೆ ತೋರಿದ್ದರು. ಈ ವೇಳೆ ಕರಾವಳಿ ಪೊಲೀಸ್ ಪಡೆ ಸಿಬ್ಬಂದಿ ಬುದ್ಧಿವಾದ ಹೇಳಿ ನಂತರ ಕಡಲ ತೀರದಲ್ಲಿ ಬಿದ್ದ ಕಸ ಕಡ್ಡಿಗಳನ್ನು ಸ್ವಚ್ಚಗೊಳಿಸುವ ಮೂಲಕ ಶಿಕ್ಷೆ ನೀಡಿದ್ದಾರೆ.