ಉಪ್ಪಿನಂಗಡಿ:ಕೆ.ಎಸ್.ಆರ್.ಟಿ ಸಿ ಸಂಸ್ಥೆಯ ಐರಾವತ ಬಸ್ ಗೆ ಹತ್ತಿಕೊಂಡ ಬೆಂಕಿ.

ಉಪ್ಪಿನಂಗಡಿ: ಕೆಎಸ್ಸಾರ್ಟಿಸಿ ಸಂಸ್ಥೆಯ ಐರಾವತ ಬಸ್ ಒಂದಕ್ಕೆ ಬೆಂಕಿ ಹಿಡಿದ ಘಟನೆ ಇಲ್ಲಿನ ಹಳೆಗೇಟು ಬಳಿ ಜು.18ರ ಬೆಳಗ್ಗೆ ನಡೆದಿದ್ದು, ಸ್ಥಳೀಯ ಯುವಕರ  ಪ್ರಯತ್ನದಿಂದ ಬೆಂಕಿ ಆರಿಸಿ ಸಂಭವಿಸಬಹುದಾಗಿದ್ದ ಹೆಚ್ಚಿನ ಅವಘಡವನ್ನು ತಪ್ಪಿಸಿದ್ದಾರೆ.

ಬೆಂಗಳೂರಿನಿಂದ – ಮಂಗಳೂರಿಗೆ ಆಗಮಿಸುತ್ತಿದ್ದ ಐರಾವತ ಬಸ್ಸಿನ ಹಿಂಬದಿ ಎಸಿಗೆ ಬೆಂಕಿ ಹತ್ತಿಕೊಂಡಿದ್ದು, ಇದನ್ನು ಗಮನಿಸಿದ ಚಾಲಕ ಹಳೆಗೇಟು ಬಳಿ ಬಸ್ಸನ್ನು ನಿಲ್ಲಿಸಿದ್ದಾನೆ. ಆಗ ಪ್ರಯಾಣಿಕರೆಲ್ಲರೂ ಬಸ್ಸಿನಿಂದ ಇಳಿದಿದ್ದಾರೆ. ಆಗ ಅಲ್ಲಿದ್ದ ಉಪ್ಪಿನಂಗಡಿ ಗ್ರಾ.ಪಂ. ಸಿಬ್ಬಂದಿಯಾದ ಇಸಾಕ್, ಇಕ್ಬಾಲ್, ಸ್ಥಳೀಯರಾದ ಜಾಯಿ, ಸ್ನೇಕ್ ಝಕಾರಿಯಾ,ಸಿದ್ದೀಕ್ ಕೊಪ್ಪಳ ಸೇರಿದಂತೆ ಅಟೋ ಚಾಲಕರು ರಸ್ತೆಯಲ್ಲಿದ್ದ ಕೆಸರು, ಮಣ್ಣು, ನೀರನ್ನು ಬಸ್ಸಿಗೆ ಎರಚಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಬಸ್ಸಿನ ಹಿಂಬದಿಗೆ ಹಾನಿಯಾಗಿದೆ.

About Janardhana K M

Check Also

ಹೆಣ್ಣು ಮಕ್ಕಳಿಂದ ಬೀದಿ ಭಜನೆ: ಪ್ರತಿಭಾ ಕುಳಾಯಿಗೆ ತೀಕ್ಷವಾಗಿ ಪ್ರತಿಕ್ರೀಯಿಸಿದ ಶಾಸಕ ಡಾ. ಭರತ್ ಶೆಟ್ಟಿ ಮಂಗಳೂರು : ಬಿಲ್ಲವ …

Leave a Reply

Your email address will not be published. Required fields are marked *