
ಮಂಗಳೂರು : ಮಂಗಳೂರಿನ ವೆನ್ಲಾಕ್ ಸರಕಾರಿ
ಆಸ್ಪತ್ರೆಯಲ್ಲಿನ ರೋಗಿಗಳನ್ನು ಒಂದು ಕಡೆಯಿಂದ ಇನ್ನೊಂದು ಕಡೆಗೆ ಸುಲಭವಾಗಿ ಕರೆದೊಯ್ಯು ಬಗ್ಗಿ ಸೇವೆ ಆರಂಭಗೊಂಡಿದೆ.

ಹೊಸ ಕಟ್ಟಡದಲ್ಲಿ ಶಸ್ತ್ರ ಚಿಕಿತ್ಸೆಯಾದರೆ ಒಂದೆರಡು ದಿವಸ ಆದ ಮೇಲೆ ಹಳೆ ಕಟ್ಟಡಕ್ಕೆ ರೋಗಿಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ಆಗ ಎಕ್ಸ್ರೇ, ಸಿಟಿ ಸ್ಕ್ಯಾನ್, ಎಂಆರ್ಐ ಸ್ಕ್ಯಾನ್ಗೆ ರೋಗಿಗಳನ್ನು ಕರೆದುಕೊಂಡು ಹೋಗಲು ಈ ಬಗ್ಗಿ ತುಂಬಾ ಉಪಯುಕ್ತವಾಗಿದೆ.
ರಾಜ್ಯದಲ್ಲೇ ಇದೇ ಮೊದಲ ಬಾರಿಗೆ ಸರಕಾರಿ ಆಸ್ಪತ್ರೆಗೆ ಬಗ್ಗಿಸೇವೆ ಸೌಲಭ್ಯ ದೊರಕಿದೆ. ಆಸ್ಪತ್ರೆಯ ಜಿಲ್ಲಾ ಶಸ್ತ್ರ ಚಿಕಿತ್ಸಕರು ಹಾಗೂ ಅಧೀಕ್ಷಕರು ಹಾಗೂ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ವರ್ಗದವರು ಐವಾನ್ ಡಿ’ಸೋಜ ಅವರಿಗೆ ಕೃತಜ್ಞತೆ ಅರ್ಪಿಸಿದ್ದಾರೆ.