ದಾಂಧಲೆ ನಡೆಸುತ್ತಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಬಂಧನಕ್ಕೆ ಒಳಪಡಿಸಿ ವಶಕ್ಕೆ ; ಆಸ್ಪತ್ರೆಗೆ ದಾಖಲು:ವಿಶು ಶೆಟ್ಟಿ
ವರದಿ;ಜನಾರ್ದನ ಮರವಂತೆ
ಉಡುಪಿ ಜ. 19 :- ಬ್ರಹ್ಮಾವರದ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕಿದ ವಸ್ತುಗಳನ್ನು ಎಸೆಯುತ್ತ ವಾಹನಗಳನ್ನು ಜಖಂಗೊಳಿಸುತ್ತ, ಸಾರ್ವಜನಿಕರಿಗೆ ಹಲ್ಲೆಯನ್ನು ಮಾಡಲು ಬರುತ್ತಿದ್ದ, ಭಯದ ವಾತವರಣ ಸೃಷ್ಟಿಸುತ್ತಿದ್ದ ವ್ಯಕ್ತಿಯನ್ನು ವಿಶುಶೆಟ್ಟಿ ಅಂಬಲಪಾಡಿಯವರು ಈಶ್ವರ ಮಲ್ಪೆ, ಹರೀಶ್ ಉದ್ಯಾವರ, ಸಾರ್ವಜನಿಕರ, ಹಾಗೂ ಪೋಲಿಸರ ಸಹಾಯದಿಂದ ರಕ್ಷಣೆ ಮಾಡಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ ಘಟನೆ ನಡೆದಿದೆ.ಮಾನಸಿಕ ಅಸ್ವಸ್ಥ ಪ್ರಕಾಶ್ (40ವರ್ಷ) ಬ್ರಹ್ಮಾವರದ ಗಾಂಧಿನಗರದ ನಿವಾಸಿಯಾಗಿದ್ದು, ಈ ಹಿಂದೆಯೂ ಖಾಯಿಲೆಯಿಂದ ಬಳಲುತ್ತಿದ್ದ ಎನ್ನಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ವ್ಯಕ್ತಿಯ ಖಾಯಿಲೆ ಉಲ್ಬಣಗೊಂಡು ತೀರಾ ಉದ್ವೇಗಕ್ಕೆ ತಲುಪಿದ್ದ . ಈ ಬಗ್ಗೆ ಬ್ರಹ್ಮಾವರ ಪೋಲಿಸರ ಮಾಹಿತಿಯ ಮೇರೆಗೆ ವಿಶುಶೆಟ್ಟಿಯವರು ರಕ್ಷಣೆ ಮಾಡಿ ಬಾಳಿಗಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ರಕ್ಷಣಾ ಸಮಯದಲ್ಲಿ ರೋಗಿಯು ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದು ಕೈಕಾಲು ಕಟ್ಟಿ ಆಸ್ಪತ್ರೆಗೆ ದಾಖಲು ಪಡಿಸಬೇಕಾಯಿತು.
ಬೆಳಗ್ಗಿನ ಜಾವದ ಮಾಹಿತಿಗೆ ಈಶ್ವರ ಮಲ್ಪೆ ಹಾಗೂ ಹರೀಶ್ ಉದ್ಯಾವರರವರು ನನಗೆ ತುರ್ತು ಸ್ಪಂಧಿಸಿದ್ದಾರೆ. ಇತ್ತಿಚೀನ ದಿನಗಳಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ * ತೀರಾ ಹೆಚ್ಚಳವಾಗುತ್ತಿದ್ದು, ಅಂತವರ ರಕ್ಷಣಾ ಕಾರ್ಯ ಬಹಳಷ್ಟು ಕಠಿನವಾಗುತ್ತಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಹಾಗೂ ಸರಕಾರಕ್ಕೆ ಬಹಳಷ್ಟು ಬಾರಿ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ಸಿಗುತ್ತಿಲ್ಲ.
ಹೀಗೆಯೇ ಮುಂದುವರೆದರೆ ಸಮಾಜದಲ್ಲಿ ಆಗಬಾರದ ದುರಂತ ಸಂಭವಿಸುವುದು ಖಚಿತ. ಇನ್ನಾದರು ಜಿಲ್ಲಾಡಳಿತ ಈ ಬಗ್ಗೆ ಸರಿಯಾದ ಕ್ರಮಕ್ಕೆ ಮುಂದಾಗಲಿ