ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟ (ರಿ)23- 24 ವಾರ್ಷಿಕ ಮಹಾಸಭೆ

ಬೈಂದೂರು ತಾಲೂಕು ಉಪ್ಪುಂದ ರಾಣಿಬಲೆ ಮೀನುಗಾರರ ಒಕ್ಕೂಟದಿಂದ ವಾರ್ಷಿಕ ಮಹಾಸಭೆ ಶಾಲೆ ಬಾಗಿಲು ಮಾತಶ್ರೀ ಸಭಾಭವನದಲ್ಲಿ ನಡೆಯಿತು,  ವೆಂಕಟರಮಣ ಖಾರ್ವಿ ಅಧ್ಯಕ್ಷತೆಯಲ್ಲಿ ಆಯವ್ಯಯ ಮಂಡನೆಯನ್ನು ಮಾಡಿ ಸಭೆಯಲ್ಲಿ ಅನೇಕ ವಿಷಯಗಳು ಚರ್ಚಿಸಿ ತೀರ್ಮಾನ ಕೈಗೊಂಡಿದ್ದು ,ಅಧ್ಯಕ್ಷರು ಮಾತನ್ನಾಡಿ ಅಕಾಲಿಕ ಮರಣ ಹೊಂದಿದ ಸಂಘದ ಸದಸ್ಯರಿಗೆ ತಲಾ ಒಂದು ಲಕ್ಷ ಪರಿಹಾರ ನಿಡಿದ್ದು, ದೇವಸ್ಥಾನದ ಜೀರ್ಣೋದ್ಧಾರಕ್ಕೆ 1,50000ರೂ ದೇಣಿಗೆಯನ್ನು ನೀಡುವುದೆಂದು
ತಿರ್ಮಾನಿಸಲಾಯಿತು
ಮೀನುಗಾರರಿಗೆ  ವರ್ಷದಿಂದ ವರ್ಷಕ್ಕೆ ಮೀನುಗಳು

ಕ್ಷಿಣಿಸುತ್ತಿದ್ದು ಕಾರಣ ಬುಲ್ ಟ್ರಾಲ್,

ಲೈಟ್ ಪಿಶೀಂಗ್‌ ದಿಂದ ನಾಡದೋಣಿ ಮೀನುಗಾರರಿಗೆ ಬಾರಿ ಹೊಡೆತ ಬಿದ್ದಿರುತ್ತದೆ, ಮೀನುಗಾರರ ಹೊಟ್ಟೆಯ ಮೇಲೆ ತಣ್ಣೆರು ಬಟ್ಟೆ ಇಟ್ಟುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ, ಮತ್ತು ಕೋಡೇರಿ 3ನೇ ಹಂತದ ಕಾಮಗಾರಿಕೆ ವಿಸ್ತರಣೆ, ದಾರಿದೀಪ, ಮೂಲಭೂತ ಸೌಕರ್ಯಗಳನ್ನು ಒದಗಿಸುವ  ಬಗ್ಗೆ, ಸಕಾಲದಲ್ಲಿ ಸೀಮೆಎಣ್ಣೆ ದೂರೆಯಲು, ಮತ್ತು ನಾಡದೋಣಿ ಜಟ್ಟಿ ನಿರ್ಮಿಸಲು ಸರ್ಕಾರಕ್ಕೆ ಮನವಿ ಮಾಡಿದರು. ನಮ್ಮ ಸಂಸ್ಥೆಗೆ ಈ ಬಾಗದ ಎಲ್ಲಾ ಮೀನುಗಾರರು ಸಂಘಟಿತರಾದರೇ ಸಂಸ್ಥೆ ಬೆಳಸಲು ಆರ್ಥಿಕ ವಾಗಿ ಸಹಕರಿಸಿದರೆ ಮೀನುಗಾರರ ಇತರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ,

ಸಂಘದ ಉಪಾಧ್ಯಕ್ಷರಾದ ತಿಮ್ಮಪ್ಪ ಖಾರ್ವಿ, ಪ್ರದಾನ ಕಾರ್ಯದರ್ಶಿ ಸುರೇಶ್ ಖಾರ್ವಿ, ಕೋಶಾಧಿಕಾರಿ ನಾಗೇಶ್ ಖಾರ್ವಿ ಸದಸ್ಯರಾದ ಶ್ರೀನಿವಾಸ ಖಾರ್ವಿ, ಎಸ್ ಕೃಷ್ಣ ಖಾರ್ವಿ,, ರಾಜೇಂದ್ರ, ಶಂಕ‌ರ್ ,ನವೀನ್, ಶರತ್‌ ಉಪಸ್ಥಿತರಿದ್ದರು, ಸುರೇಶ್ ಖಾರ್ವಿ ಸ್ವಾಗತಿಸಿದರು, ರವೀಂದ್ರ ಖಾರ್ವಿ ಪ್ರಾರ್ಥನೆಗೈದರು ಸುಬ್ರಹ್ಮಣ್ಯ ಎಂ ನಿರೂಪಿಸಿದರು

ವರದಿ ;ಜನಾರ್ದನ ಕೆ ಎಂ ಮರವಂತೆ

About Janardhana K M

Check Also

ಮಲ್ಪೆ: ಕಡಲು ಪ್ರಕ್ಷುಬ್ಧ- ನಾಡ ದೋಣಿ ಮಗುಚಿ ಬಿದ್ದು ಮೀನುಗಾರ ಸಾವು

ಬೈಂದೂರು;ಮಲ್ಪೆ ನಾಡ ದೋಣಿ ಮಗುಚಿ ಬಿದ್ದ ಪರಿಣಾಮ ಮೀನುಗಾರ ಸಾವನ್ನಪ್ಪಿದ ಘಟನೆ ಉಡುಪಿಯ ಪಡುಕೆರೆ ಕಡಲ ತೀರದಲ್ಲಿ ಇಂದು ಸಂಭವಿಸಿದೆ.ಪಿತ್ರೋಡಿ …

Leave a Reply

Your email address will not be published. Required fields are marked *