ಉಡುಪಿ ಮಾ.20: ನಿಟ್ಟೂರಿನಲ್ಲಿ ತಿಂಗಳ ಹಿಂದೆ ಮಲಮೂತ್ರಾದಿ ನಡುವೆಯೇ ಅನಾಗರಿಕವಾಗಿ ಬದುಕು ಸಾಗಿಸುತ್ತಿದ್ದ ವೃದ್ಧ ತಾಯಿ ಕಮಲ ಶೆಟ್ಟಿ ಹಾಗೂ ಮಾನಸಿಕ ಅಸ್ವಸ್ಥ ಮಗ ಅನಿಲ್ ಶೆಟ್ಟಿ ಯವರನ್ನು ವಿಶು ಶೆಟ್ಟಿ ಅಂಬಲಪಾಡಿ ರಕ್ಷಿಸಿ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಇದೀಗ ವೃದ್ಧ ತಾಯಿಯನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ್ದು ಸಂಬಂಧಿಕರು ಯಾರೂ ಸ್ಪಂದಿಸದೇ ಇರುವುದರಿಂದ ವಿಶು ಶೆಟ್ಟಿಯವರ ವಿನಂತಿಗೆ ಬೈಲೂರಿನ ಹೊಸಬೆಳಕು ಆಶ್ರಮದ ಮುಖ್ಯಸ್ಥರಾದ ಶ್ರೀಮತಿ ತನುಲಾರವರು ಆಶ್ರಯ ನೀಡಲು ಸಮ್ಮತಿಸಿದ್ದು ವಿಶು ಶೆಟ್ಟಿ ಆಂಬುಲೆನ್ಸ್ ಮುಖಾಂತರ ವೃದ್ದೆಯನ್ನು ಕಾರ್ಕಳದ ಬೈಲೂರಿನ ಹೊಸಬೆಳಕು ಆಶ್ರಮಕ್ಕೆ ದಾಖಲಿಸಿದ್ದಾರೆ. ಮಗ ಅನಿಲ್ ಶೆಟ್ಟಿ ಕೊಳಲಗಿರಿ ಸ್ವರ್ಗ ಆಶ್ರಮದಲ್ಲಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು ಬಹಳಷ್ಟು ಸುಧಾರಿಸಿದ್ದಾರೆ.ಇನ್ನಾದರೂ ಸ್ಪಂದಿಸುವ ಸಂಬಂಧಿಕರು ಇದ್ದರೆ ಹೊಸ ಬೆಳಕು ಹಾಗೂ ಸ್ವರ್ಗ ಆಶ್ರಮ ಸಂಪರ್ಕಿಸಬೇಕೆಂದು ವಿಶು ಶೆಟ್ಟಿ ವಿನಂತಿಸಿದ್ದಾರೆ