October 23, 2025
img_20250819_1053353005662449699281743.jpg
ಬೈಂದೂರು ,;ಮರವಂತೆ ಗ್ರಾಮ ಪಂಚಾಯತಿನ  ಪ್ರಥಮ ಸುತ್ತಿನ  ಗ್ರಾಮ ಸಭೆ ಸುವರ್ಣ ಸೌಧದ ಅಟಲ್ ಬಿಹಾರಿ ವಾಜಪೇಯಿ ವೇದಿಕೆಯಲ್ಲಿ ನಡೆಯಿತು, ಗ್ರಾಮ ಪಂಚಾಯಿತಿನ ಅಧ್ಯಕ್ಷರಾದ ನಾಗರಾಜ್ ಪಟ್ಗಾರ್ ಮತ್ತು ಅಭಿವೃದ್ಧಿ ಅಧಿಕಾರಿ ಗೀತಾ ಮತ್ತು ಸರ್ವ ಸದಸ್ಯರು  ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು
ಇಂದಿನ ಸಭೆಯಲ್ಲಿ  ಹಿಂದಿನ ವರಿದಿಯನ್ನು ದೀನೇಶ ರವರು ವಾಚಿಸಿದರು,ಈ ಸಭೆಯಲ್ಲಿ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದು ಗ್ರಾಮಕ್ಕೆ ಸಂಬಂಧಪಟ್ಟ ಕುಂದು ಕೊರತೆಗಳನ್ನು ಮತ್ತು ಹೊಸ ನಿಯಮಗಳು ಜಾರಿಗೆ ಬಂದದನ್ನು ಸವಿಸ್ತಾರವಾಗಿ ವಿವರಣೆ ನೀಡಿ, ಸರಿಯಾದ ಮಾರ್ಗದರ್ಶನನ್ನು ನೀಡಿದರು, , ರಾಜ್ಯ ಮಟ್ಟದಲ್ಲಿ ರಾಂಕ್ ಪಡೆದು ವಿಧ್ಯಾರ್ಥಿಗಳನ್ನು ಗುರುತಿಸಿ ಅವರನ್ನು ಸನ್ಮಾನಿಸಲಾಯಿತು ಗ್ರಾಮಕ್ಕೆ ಸಂಬಂಧಪಟ್ಟ ಕೆಲವು ಚರ್ಚೆಗಳು ನಡೆಯಿತು,
ಗೋರಿಕೆರಿಯ ಹೂಳೆತ್ತುವ ಬಗ್ಗೆ ಚರ್ಚೆ ನಡೆಯಿತು ಮೂರನೇ ಮತ್ತು  ಎರಡನೇ ವಾರ್ಡಿನ ತೋಡಿನ ಸಮಸ್ಯೆ ಗಾಂಧಿ ನಗರ ರಸ್ತೆ ಸಮಸ್ಯೆಯ ಬಗ್ಗೆ ಚರ್ಚೆ ನಡೆಯಿತು, ಅಧ್ಯಕ್ಷ ರ ಹೇಳಿಕೆಯ ಮೇಲೆ  ಗ್ರಾಮ ಪಂಚಾಯಿತಿನ ಯಾವುದೇ ಪಂಡ್ ಇಲ್ಲದಿರುವುದರಿಂದ ಅದನ್ನು ಮಾನ್ಯ ಸಚಿವರು ಅಥವಾ ಶಾಸಕರ ಅನುದಾನದಲ್ಲಿ ಮಾಡಲು ನಿರ್ಧರಿಸಲಾಗಿದೆ,ಈಗಾಗಲೇ  ಯಾಕ್ಷೇಶ್ವರಿ ದೇವಸ್ಥಾನದ ರಸ್ತೆ ಎರಡು ತಿಂಗಳಲ್ಲಿ ರಸ್ತೆಗೆ ಅನುದಾನ ಬಿಡುಗಡೆ ಮಾಡಲಾಗಿದೆ, ಎಂದು ತಿಳಿಸಿದರು,ಹಾಗೆ ತ್ರಾಸಿ ಮತ್ತು ಮರವಂತೆ ಬೀಚಿನ ಗಡಿ ಸಮಸ್ಯೆ ಗ್ರಾಮ ಸಭೆಯಲ್ಲಿ ಸುದೀರ್ಘವಾದ ಚರ್ಚೆ ನಡೆಯಿತು, ಗ್ರಾಮಸಭೆಯಲ್ಲಿ ಮತ್ತು ಮೂರನೇ ವಾರ್ಡು ಮತ್ತು ನಾಲ್ಕನೇ ವಾರ್ಡಿನ ಸದಸ್ಯರ ಅನುಮತಿಯರಿಗೆ ರೇಷನ್ ಕಾರ್ಡ್  ಬಗ್ಗೆ ಮರವಂತೆ ಸಹಕಾರಿ ಸಂಘಕ್ಕೆ ನೀಡುವ ಬಗ್ಗೆ ಚರ್ಚೆ ನಡೆಯಿತು, ಈ ಸಂದರ್ಭದಲ್ಲಿ  ಹಿರಿಯ ಪತ್ರಕರ್ತ ಎಸ್ ಜನಾರ್ದನ್ ಅವರು ಮತ್ತು ಶಂಕ‌ರ್ ಖಾರ್ವಿ ಇನ್ನಿತರ ಅಧಿಕಾರಿಗಳು ಸರ್ವ ಸದಸ್ಯರು ಮತ್ತು  ಗ್ರಾಮ ಸದಸ್ಯರು ಹಾಜರಿದ್ದರು

About The Author

Leave a Reply

Your email address will not be published. Required fields are marked *