October 23, 2025
screenshot_20241120_200229624090481697485989.jpg
ಬೈಂದೂರು ;ಶಿರೂರು ಕೊಟ್ಟಿಗೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಅಪಾರ ಹಾನಿ ಸಂಭವಿಸಿದ ಘಟನೆ ಶಿರೂರು ಸಮೀಪದ ದೊಂಬೆ ಬೇಲೆಮನೆ ಎಂಬಲ್ಲಿ ಬುಧವಾರ ಸಂಜೆ ನಡೆದಿದೆ.ಇಲ್ಲಿನ ಶೇಷ ಮಾಸ್ಟ‌ರ್ ಮನೆ ಸಮೀಪದ ಕೊಟ್ಟಿಗೆಗೆ ಬುಧವಾರ 04 ಗಂಟೆ ಹೊತ್ತಿಗೆ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ್ಡಿದ್ದು,ಸಮುದ್ರ ಸಮೀಪ ಇರುವ ಕಾರಣ ಗಾಳಿಯ ರಭಸಕ್ಕೆ ಬೆಂಕಿ ಅಧಿಕವಾಗಿದ್ದು ಬೆಂಕಿ ಕೆನ್ನಲಗೆ ಕೊಟ್ಟಿಗೆಯನ್ನು ಭಸ್ಮವಾಗಿದೆ,.ಕೊಟ್ಟಿಗೆಯಲ್ಲಿ ಹುಲ್ಲು, ಕೃಷಿ ಪರಿಕರ ಸಂಪೂರ್ಣ ಸುಟ್ಟು ಹೋಗಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.

ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ,ಕರಾವಳಿ ಕಾವಲು ಪಡೆ,ಮೆಸ್ಕಾಂ ಇಲಾಖೆ,ಪೊಲೀಸ್‌ ಅಧಿಕಾರಿಗಳು ಆಗಮಿಸಿದ್ದಾರೆ.ಸ್ಥಳೀಯರು ಹಾಗೂ ಇಲಾಖೆಯ ಪ್ರಯತ್ನದಿಂದ ಬೆಂಕಿ ನಂದಿಸಲಾಯಿತು.ಇದರಿಂದಾಗಿ ಅಕ್ಕಪಕ್ಕದಲ್ಲಿ ಮನೆಗಳಿದ್ದು ಯಾವುದೇ  ಹಾನಿ ಸಂಭವಿಸಿಲ್ಲ.

About The Author

Leave a Reply

Your email address will not be published. Required fields are marked *