ಮೃತ್ಯು ಕೂಪ ವಾದ ಮರವಂತೆ ಗೊರಿಕೇರಿ ಕೆರೆ. ತಡೆಗೋಡೆ ಇಲ್ಲದ ಗೊರಿಕೇರಿ ಕೆರೆ
ಬೈಂದೂರು ತಾಲೂಕು ಮರವಂತೆ ಗ್ರಾಮದ ಗೋರಿಕೇರಿ ಒಂದು ಪ್ರಸಿದ್ಧ ಕೆರೆ ಆಗಿದ್ದು ಈ ಕೆರೆಯ ನೀರು ಕೃಷಿ ಮತ್ತು ಕಂಬಳ ಗದ್ದೆಗೆ ಉಪಯೋಗಿಸುತ್ತಿದ್ದರು,ಈ ಕೆರೆಯ ಅವೈಜ್ಞಾನಿಕ ಕಾಮಗಾರಿಯಿಂದ ಸುತ್ತಮುತ್ತಲು ವಾಸಿಸುವ ಜನರಿಗೆ ಆತಂಕ ಉಂಟು ಮಾಡಿದೆ,
ಬೈಟ್ 1 ಸಿಂಚನ
ಸಿಂಚನ ಎನ್ನುವ ಹುಡುಗಿ ತನ್ನ 5ನೇ ತರಗತಿಯಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ಮತ್ತು ಗ್ರಾಮ ಪಂಚಾಯಿತಿಗೆ ಮನವಿ ಮಾಡುತ್ತಾ ಇದ್ದಾಳೆ ಆದ್ರೆ ಇಷ್ಟರ ತನಕ ಯಾವುದೇ ಪ್ರಯೋಜನವಾಗಿಲ್ಲ ಕಳೆದ ವರ್ಷ ಕೇಂದ್ರ ಸರ್ಕಾರದ ಅಮೃತ ಸರೋವರ ಯೋಜನೆ, ಜಾರಿಯಾಗಿದ್ದು ಸುಮಾರು ಒಂದು ಕೋಟಿ ಅನುದಾನ ಬಂದಿರುತ್ತದೆ ಆದರೆ ಇದರ ಕಾಮಗಾರಿ ಅರ್ಧಕ್ಕೆ ನಿಲ್ಲಿಸಿದ್ದು, ನಿವಾಸಿಗಳು ಪ್ರಶ್ನಿಸಿದಾಗ ಅನುದಾನದ ಹಣ ಬಂದ್ದಿಲ್ಲಾ ಎನ್ನುವ ಮಾತು ಕೇಳಿ ಬಂದಿದ್ದು ಸ್ಥಳಿಯರು ಹೇಳಿರುತ್ತಾರೇ
ಬೈಟ್ 2
ಈಗಾಗಲೇ ಆ ಕೆರೆಯಲ್ಲಿ ಮೂರು ಅನಾಹುತಗಳು ನಡೆದಿದ್ದು ತಡೆಗೋಡೆ ಇಲ್ಲದೆ ಜನರು ಭಯಬಿತರಾಗಿದ್ದು, ಕೆರೆಯ ದಂಡೆಯ ಮೇಲೆ ಒಂದು ಮನೆಯಿದ್ದು ಆ ಮನೆಯವರಿಗೆ ಅಪಾಯ ಕಟ್ಟಿಟ್ಟ ಬುತ್ತಿ .ಈಗಾಗಲೇ ಸಣ್ಣ ಸಂಕ ನಿರ್ಮಾಣ ಮಾಡಿದ್ದು ಅದರಲ್ಲಿ ಶಾಲಾ ಮಕ್ಕಳು ಮತ್ತು ವಯೋವೃದ್ಧರು ಹಗಲು ರಾತ್ರಿ ಎನ್ನದೆ ತಿರುಗಾಡುತ್ತಿದ್ದು, ಮತ್ತು ದಾರಿದೀಪವಿಲ್ಲದೆ ಅಲ್ಲಿನ ನಿವಾಸಿಗಳಿಗೆ ಬಾರಿ ಆತಂಕ ಉಂಟು ಮಾಡಿದೆ.ಅಲ್ಲಿ ಹತ್ತಿರವಿದ್ದ ನಾಮಫಲಕ ಟೆಂಡರ್ ಮೊತ್ತ ಹಾಕಿ ಅಳಿಸಿಹಾಕಿದ್ದು ಅನುಮಾನಕ್ಕೆ ದಾರಿ ಮಾಡಿಕೊಟ್ಟಿದೆ.
ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಅಲ್ಲಿನ ನಿವಾಸಿಗಳಿಗೆ ನ್ಯಾಯ ಒದಗಿಸಿ, ಪರಿಶೀಲನೆ ಮಾಡಬೇಕೆಂದು ಸಾರ್ವಜನಿಕರ ಮನವಿ ಮಾಡಿದ್ದಾರೆ, ಈ ಸಂದರ್ಭದಲ್ಲಿ ಅಲ್ಲಿನ ನಿವಾಸಿಗಳಾದ ಬೇಬಿ, ಸಿಂಚನ, ಜೆಸಿಂತ್ ಫೆರ್ನಾಂಡಿಸ್, ಸುರೇಶ್, ಸುಷ್ಮಾ, ಸುಪ್ರೀತಾ, ರಮೇಶ್ ಮತ್ತು ನಾರಾಯಣ ಉಪಸ್ಥಿತರಿದ್ದರು