ಸಮಾಜ ಸೇವಕರಿರ್ವರ ಜಂಟಿ ಕಾರ್ಯಚರಣೆ ; ಬೀಕರ ಮನೋರೋಗಿಯ ಸ್ನೇಹಾಲಯಕ್ಕೆ ದಾಖಲು
ಉಡುಪಿ.ಮಾ.22 :- ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಕಟ್ಟಡಗಳ ಪೈಪ್, ಮೋಟಾರ್ ಹಾಗೂ ಸೊಸ್ತುಗಳನ್ನು ಹಾನಿಗೊಳಿಸುತ್ತ, ಜೊತೆಗೆ ಕಲ್ಲುಗಳನ್ನು ಎಸೆಯುತ್ತ ಮಹಿಳೆಯರಿಗೆ ಭಯದ ವಾತವರಣ ಸೃಷ್ಟಿಸಿದ ಬೀಕರ ಮನೋರೋಗಿಯನ್ನು ಸಮಾಜ ಸೇವಕರಾದ ವಿಶುಶೆಟ್ಟಿ ಅಂಬಲಪಾಡಿ ಹಾಗೂ ಈಶ್ವರ ಮಲ್ಪೆಯವರು ಜಂಟಿ ಕಾರ್ಯಚರಣೆ ನಡೆಸಿ ವಶಕ್ಕೆ ಪಡೆದು ಕೇರಳದ ಮಂಜೇಶ್ವರದ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಸ್ನೇಹಾಲಯಕ್ಕೆ ದಾಖಲಿಸಿದ್ದಾರೆ.
ಯುವಕ ಗಿರಿ (25 ವರ್ಷ) ತಮಿಳುನಾಡು ಮೂಲದವನಾಗಿದ್ದು, ಕಳೆದ ಕೆಲವು ದಿನಗಳಿಂದ ಹಿರಿಯಡ್ಕ ಪರಿಸರದಲ್ಲಿ ತಿರುಗಾಡುತ್ತಿದ್ದ. ಕಳೆದ ಮೂರು ದಿನಗಳಿಂದ ಯುವಕ ಬೀಕರ ಉಗ್ರ ರೂಪದಲ್ಲಿ ವರ್ತಿಸುತ್ತಿದ್ದು, ಸಿಕ್ಕ ಸಕ್ಕ ವಸ್ತುಗಳನ್ನು ಹಾಳುಗೆಡವುತ್ತ ಜನರಿಗೆ ಕಲ್ಲೆಸೆಯುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಸಮಾಜಿಕ ಕಾರ್ಯಕರ್ತರು ಆಗಮಿಸಿದ್ದು, ರಕ್ಷಣಾ ಸಮಯ ತೀವ್ರ ಪ್ರತಿರೋದಪಡಿಸಿದ್ದು ರಕ್ಷಣೆಗೆ ಹರಸಾಹಸ ಪಡಬೇಕಾಯಿತುರಕ್ಷಣೆಗೆ ಹರಸಾಹಸ ಪಡಬೇಕಾಯಿತು. ರಕ್ಷಿಸಿ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿ ತದನಂತರ ಕೇರಳದ ಮಂಜೇಶ್ವರ ಸ್ನೇಹಾಲಯಕ್ಕೆ ಕರೆದೊಯ್ಯಲಾಯಿತು. ವಿಶುಶೆಟ್ಟಿಯವರ ವಿನಂತಿಗೆ ಆಶ್ರಮದ ಮುಖ್ಯಸ್ಥರಾದ ಜೋಸೆಫ್ ಕ್ರಾಸ್ತ ಆಶ್ರಯ ನೀಡಿದರು. ರಕ್ಷಣಾ ಕಾರ್ಯದಲ್ಲಿ ಹರೀಶ್ ಉದ್ಯಾವರ ಹಾಗೂ ಬುರಾಹನ್ ಮಲ್ಪೆ ಸಹಕರಿಸಿದರು.