ಕುಂದಾಪುರ : ಸ್ಟಿಂಗ್ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಕಿರಣ್ ಪೂಜಾರಿಯವರಿಂದ ಅರೆಬೆತ್ತಲೆ ಧರಣಿ


ಪೋಲಿಸ್ ಅಧಿಕಾರಿ PSI ವಿನಯ್ ಕೊರ್ಲಹಳ್ಳಿ ತಮ್ಮ ಮೇಲೆ ಕುಂದಾಪುರದಲ್ಲಿ ಎರಡು ಮತ್ತು ಕೊಲ್ಲೂರಿನಲ್ಲಿ ಒಂದು ಸುಳ್ಳು ಕಂಪ್ಲೇಂಟ್ ದಾಖಲಿಸಿ, ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇರುವಾಗ ಕೇಸು ದಾಖಲಿಸಿದವರ ಪರವಾಗಿ ಸತ್ಯ ಅಸತ್ಯೆಯನ್ನು ಅವಲೋಕಿಸದೆ, ದಲಿತ ಮಹಿಳೆಯರ ಮೇಲೆ ಸುಳ್ಳು ದೂರು ದಾಖಲಿಸಿ, ಅವರು ನೀಡಿದ ದೂರನ್ನು ದಾಖಲಿಸದೇ ಹಿಂದೆ ಕಳುಹಿಸಿದ್ದಾರೆ. ಇವರ ವಿರುದ್ಧ ಇಲಾಖಾ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಗ್ರಾಮ ಆಡಳಿತ ಅಧಿಕಾರಿ ಹರೀಶ್ ಮೊಗವೀರ ಸರಕಾರಿ ಜಾಗವನ್ನು
ಒತ್ತುವರಿ ಮಾಡಿದ ಕೆಲವರ ಕೈಗೊಂಬೆ ಆಗಿ ಬಹುಪರಾಕ್ ಹೇಳುತ್ತಿದ್ದಾರೆ ಎಂಟು ಬಾರಿ ತಹಸೀಲ್ದಾರ್ ಆದೇಶ ಉಲ್ಲಂಘನೆ ಮಾಡಿದ್ದಾರೆ. ಪತ್ರಕರ್ತರು ಮಾಹಿತಿ ಕೇಳಿದಾಗ ಸರಿಯಾದ ವರದಿ ನೀಡದೆ ಏನು ಮಾಡಲಿಕ್ಕೆ ಆಗುತ್ತೆ ಎಂದು ಅಗೌರವ ತೋರಿದ್ದಾರೆ. ಉಚ್ಚ ನ್ಯಾಯಾಲಯ ಮತ್ತು ವಿಶೇಷ ಭೂ ಕಬಳಿಕೆ ನ್ಯಾಯಾಲಯದಲ್ಲಿ ಕೇಸ್ ಇದ್ದರು ನ್ಯಾಯಾಂಗ ಉಲ್ಲಂಘನೆ ಬಗ್ಗೆ ಅರಿವು ಮೂಡಿಸದೆ, ಕರ್ತವ್ಯದಲ್ಲಿ ಲೋಪ, ನಿರ್ಲಕ್ಷತನ, ಹಾಗು ಕರ್ತವ್ಯ ದುರ್ಬಳಕೆ ಮಾಡಿದ ಅವರನ್ನು ಕೂಡಲೇ ಅಮಾನತು ಮಾಡಬೇಕು ಎಂದು ಅಗ್ರಹಿಸಿದ್ದಾರೆ.
ಧರಣಿ ಸ್ಥಳಕ್ಕೆ ಕುಂದಾಪುರ ತಹಸೀಲ್ದಾರ್ ಪ್ರದೀಪ್ ಕುರ್ಡೇಕರ್, DYSP ಕುಲಕರ್ಣಿ,
ಸಬ್ ಇನ್ಸೆಕ್ಟರ್ ನಂಜಪ್ಪರವರು ಭೇಟಿ ನೀಡಿ ನೀವು ಹೇಳಿದ ಎಲ್ಲಾ ಪ್ರಕರಣಗಳು ನಮ್ಮ ಗಮನದಲ್ಲಿದೆ ಈಗಾಗಲೇ ತಪ್ಪಿದಸ್ತರಿಗೆ ನೋಟಿಸ್ ನೀಡಿದ್ದೇವೆ. DYSP ಯವರು ಪತ್ರಿಭಟನ ಸ್ಥಳದಲ್ಲಿ ದಲಿತ ಮಹಿಳೆಯರ ದೂರು ಅರ್ಜಿಯನ್ನು ಪಡೆದು ತಪ್ಪಿದಸ್ತರ ಎಲ್ಲರ ವಿರುದ್ಧ ಕುಲಂಕುಶವಾಗಿ ಪರಿಶೀಲಿಸಿ ಸೂಕ್ತ ಕಾನೂನು ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿ ಧರಣಿಯನ್ನು ಮುಗಿಸಲು ಹೇಳಿದ್ದರು.
ಅವರ ಮಾತಿಗೆ ಮನ್ನಣೆ ನೀಡಿ ಉಚ್ಚ ನ್ಯಾಯಾಲಯಕ್ಕೆ ಅಗೌರವ ತೋರಿದ ಎಲ್ಲರನ್ನು ಬಂಧಿಸಬೇಕೆಂದು ಪತ್ರಕರ್ತ ಕಿರಣ್ ಪೂಜಾರಿ ಆಗ್ರಹಿಸಿ ಒಂದು ವೇಳೆ ನ್ಯಾಯ ಸಿಗದೇ ಇದ್ದಲ್ಲಿ ಮುಂದಿನ ದಿನದಲ್ಲಿ ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ದೊಡ್ಡ ಮಟ್ಟದಲ್ಲಿ ಧರಣಿ ನಡೆಸುತ್ತೇವೆ ಎಂದು ಮಾಧ್ಯಮಕ್ಕೆ ತಿಳಿಸಿರುತ್ತಾರೆ.