ಫೈನಾನ್ಸ್ ಸಾಲ ನೀಡುವ ಜ್ಯುವೆಲ್ಲರಿ ಮಾಲೀಕನ ಗ್ಯಾಂಗ್ ನಿಂದ ಮಹಿಳೆಯರ ಬ್ಲಾಕ್ ಮೇಲ್

ಉಡುಪಿ: ನಗರದಲ್ಲಿ ಜ್ಯುವೆಲ್ಲರಿ ವ್ಯಾಪಾರದೊಂದಿಗೆ ಅಕ್ರಮವಾಗಿ ಹಣಕಾಸು ಬಡ್ಡಿ ವ್ಯವಹಾರ ನಡೆಸುತ್ತಿರುವ ಭುವನ ಜ್ಯುವೆಲ್ಲರಿಯ ಮಾಲಕ ಚಿನ್ನದ ವ್ಯಾಪಾರಿ ರಾಜ್ ಗೋಪಾಲ್ ಆಚಾರ್ಯ ಎಂಬವ ಸಾಲ ಪಡೆಯಲು ಬಂದ ಮಹಿಳೆಯರಿಂದ ಚೆಕ್ ಪಡೆದು ಆ ನಂತರ ಸಾಲ ಮರುಪಾವತಿ ಮಾಡಿದ ಮೇಲೂ ಚೆಕ್ ಹಿಂತಿರುಗಿಸದೆ ಆ ಚೆಕ್ ಹಿಡಿದು ಕೊಂಡು ಮಹಿಳೆಯರನ್ನು ಬ್ಲಾಕ್ ಮೇಲ್ ಮಾಡಿ

ತನ್ನೊಂದಿಗೆ ಮಲಗುವಂತೆ ಬಲವಂತವಾಗಿ ಪೀಡಿಸುತ್ತಿದ್ದು ಈತನ ಬ್ಲಾಕ್ ಮೇಲ್ ಗೆ ಹೆದರಿ ನಗರದ ಹಲವಾರು ಮಹಿಳೆಯರು ಈತನಿಗೆ ಬಲಿಯಾಗಿ ಮಾನ ಕಳೆದುಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಇಷ್ಟೇ ಅಲ್ಲದೆ ತಾನು ಅನುಭವಿಸಿದ ನಂತರ ತನ್ನ ಅಕ್ರಮಗಳಿಗೆ ಬೆಂಗಾವಲಾಗಿ ನಿಂತಿರುವ ಮಂಗಳೂರಿನ ಪತ್ರಕರ್ತನ ಜೊತೆಯೂ ಮಲಗಬೇಕು ಇಲ್ಲದಿದ್ದರೆ ಅವನು ಪತ್ರಿಕೆಯಲ್ಲಿ

ನಿಮ್ಮ ಫೋಟೋ ಎಡಿಟಿಂಗ್ ಮಾಡಿ ನಗ್ನ ಚಿತ್ರಗಳನ್ನು ಹಾಕಿ ನಿಮ್ಮ ಮಾನ ಹರಾಜು ಹಾಕುತ್ತಾನೆ ಎಂದು ಬೆದರಿಸಿ ಅವನ ಜೊತೆಗೂ ಮಲಗುವಂತಹ ಸ್ಥಿತಿ ನಿರ್ಮಾಣ ಮಾಡಿ ಬ್ಲಾಕ್ ಮೇಲ್ ಮಾಡುತ್ತಾ ಈತನ ಬಳಿ ಸಾಲ ಪಡೆದ ಮಹಿಳೆಯರನ್ನು ಲೈಂಗಿಕವಾಗಿ ಬಲಿ ಪಶುಗಳನ್ನಾಗಿಸಿ ಇವರ ಗ್ಯಾಂಗ್ ಬಳಸಿ ಕೊಳ್ಳುತ್ತಿದೆ ಎಂದೂ ಇದೀಗ ಇವರ ಬ್ಲಾಕ್ ಮೇಲ್ ಗೆ ಬೆದರದೆ ಇವರನ್ನು ಪ್ರತಿಭಟಿಸಿದ ಮಹಿಳೆಯರ ಬಗ್ಗೆ ಅವರ ಪತ್ರಿಕೆಯಲ್ಲಿ ಮಾನನಷ್ಟವಾಗುವಂತೆ ಅಸಭ್ಯವಾಗಿ ಸುದ್ದಿ ಪ್ರಕಟಿಸಿದ್ದಲ್ಲದೆ ಪೊಲೀಸರಿಗೆ ದೂರು ನೀಡಬಾರದು ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಇವರ ಬ್ಲಾಕ್ ಮೇಲ್ ನಿಂದ ನೊಂದಿರುವ ಮಹಿಳೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪಿರ್ಯಾದಿದಾರರು ಸುಮಾರು 4-5 ವರ್ಷಗಳಿಂದ ಸ್ವ-ಉದ್ಯೋಗವನ್ನು ನಡೆಸಿಕೊಂಡು ಬಂದಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಇವರಿಗೆ ವ್ಯಾಪಾರಕ್ಕೆ ಸಾಲವಾಗಿ ಉಡುಪಿಯಲ್ಲಿ ಹಣಕಾಸು ಸಾಲ ನೀಡುವ ಉಡುಪಿಯ ಭುವನ ಜುವೆಲ್ಲರ್ಸ್ ನ ಮಾಲಕ 1 ನೇ ಆಪಾದಿತ ರಾಜ್ ಗೋಪಾಲ್ ಆಚಾರ್ಯ (64) ಎಂಬವರ ಬಳಿ ಉದ್ಯೋಗದ ನಿಮಿತ್ತ ಹಣವನ್ನು ಸಾಲವಾಗಿ ಕೇಳಿದ್ದು, ಬಡ್ಡಿ ಸಮೇತಾ ಪಿರ್ಯಾದಿದಾರರು ಹಿಂದಿರುಗಿಸಿರುತ್ತಾರೆ ಎಂದಿದ್ದಾರೆ. ಸುಮಾರು 5 3 & ໖:14/01/2025 ಉಡುಪಿ ಕೋರ್ಟ್ ಎದುರುಗಡೆ ಇರುವ ಪಿರ್ಯಾದಿದಾರರ ಆಫೀಸ್ ಗೆ 1 ನೇ ಆಪಾದಿತ ರಾಜ್ ಗೋಪಾಲ್ ಆಚಾರ್ಯ ಅಶ್ಲೀಲವಾಗಿ ಮಾತನಾಡಿದ್ದು ಪಿರ್ಯಾದಿದಾರರ ಹಣದ ವ್ಯವಹಾರ ಮುಗಿದರೂ ಕೂಡಾ ಸುಮ್ಮನೆ ಪದೇ ಪದೇ ಯಾರೂ ಇಲ್ಲದ ಸಮಯದಲ್ಲಿ, ಬಂದಿರುವುದು ಸರಿಯಲ್ಲ ನಾನು ಈ ಬಗ್ಗೆ ನಿಮ್ಮ ಹೆಂಡತಿ 3ನೇ ಆಪಾದಿತೆ ಸುಜಾತಳ ಬಳಿ ಹೇಳುವುದಾಗಿ ತಿಳಿಸಿದಾಗ ರಾಜ್ ಗೋಪಾಲ್ ಆಚಾರ್ಯ ನು ಆಕ್ರೋಶದಿಂದ ಪಿರ್ಯಾದಿದಾರರವರ ಎದೆಗೆ ಬಲವಂತವಾಗಿ ಕೈ ಹಾಕಿ ಒಳ ಉಡುಪು ಎಳೆದು, ಬ್ರಾ ಹರಿದು ಹೋಗಿದ್ದು ಆತನಿಂದ ತಪ್ಪಿಸಿಕೊಂಡು ಆಫೀಸಿನ ಒಳ ಕೋಣೆಗೆ ಹೋದಾಗ ರಾಜ್ ಗೋಪಾಲ್ ಆಚಾರ್ಯ ಹಿಂದಿನಿಂದ ಬಂದು ತಬ್ಬಿ ಹಿಡಿದು ಅತ್ಯಾಚಾರ ಮಾಡಲು ಯತ್ನಿಸಿರುತ್ತಾನೆ

ಪಿರ್ಯಾದಿದಾರರು ಕಾಲಿನಿಂದ ತುಳಿದು ತಪ್ಪಿಸಿಕೊಂಡು ರಾಜ್ ಗೋಪಾಲ್‌ ಆಚಾರ್ಯ ನನ್ನು ದೂಡಿ ಹಾಕಿ ಬಾಗಿಲು ಹಾಕಿಕೊಂಡಿರುತ್ತಾರೆ ಎಂದಿದ್ದಾರೆ, ಆಗ ಹೊರಗಡೆ ಇದ್ದ ರಾಜ್ ಗೋಪಾಲ್ ಆಚಾರ್ಯ ನು ಒಂದು ದಿನ ನೀನು ನನ್ನ ಕಾಲ ಬುಡಕ್ಕೆ ಬಂದು ನನ್ನೊಂದಿಗೆ ಮಲಗಿಯೇ ಮಲಗುತ್ತಿ, ನೀನು ಬರದಿದ್ದರೆ ನೀನು ಕೊಟ್ಟ ಚೆಕ್ ಅನ್ನು ಕೋರ್ಟ್ ಗೆ ಹಾಕಿ ನಿನ್ನನ್ನು ಹಿಂಸಿಸುತ್ತೇನೆ ಎಂದು ಹೇಳಿರುತ್ತಾನೆ ಎಂದಿದ್ದಾರೆ. ಸಮಾಜದಲ್ಲಿ ಮಾನಕ್ಕೆ ಹೆದರಿ ಆಗ ಪೊಲೀಸರಿಗೆ ದೂರು ನೀಡಲು ಹಿಂಜರಿದಿದ್ದೆ ಎಂದು ನೊಂದ ಮಹಿಳೆ ಹೇಳಿ ಕೊಂಡಿದ್ದಾರೆ.

ನಂತರದ ದಿನಗಳಲ್ಲಿ ಹೆದರಿ ಕೊಂಡಿದ್ದ ನನ್ನನ್ನು ರಾಜ್ ಗೋಪಾಲ್ ಆಚಾರ್ಯ ನು ದೈಹಿಕ ಸಂಪರ್ಕಕ್ಕೆ ಒತ್ತಾಯಿಸುತ್ತಿದ್ದು ಮತ್ತು ಆತನ ಸ್ನೇಹಿತನಾದ 2ನೇ ಆಪಾದಿತ ದತ್ತಾತ್ರೇಯ ಹೆಗ್ಡೆಗೆ ನಿನ್ನ ಪೋಟೋವನ್ನು ನೋಡಿದ ಮೇಲೆ ದತ್ತಾತ್ರೇಯ ಹೆಗಡೆಗೆ ಕೂಡ ನಿನ್ನ ಮೇಲೆ ದೈಹಿಕ ಆಸೆಯನ್ನು ಹೊಂದಿದ್ದಾನೆ ಆತನಿಗೂ ನೀನು ಬೇಕು, ನಾವು ಒಟ್ಟಿಗೆ ಡೆಲ್ಲಿಗೆ ಹೋಗುವ, ನೀನು ಈ ವಿಷಯವನ್ನು ಹೊರಗೆ ಹೇಳಿದ್ದಲ್ಲಿ, ನಿನ್ನ ಪೋಟೋವನ್ನು ಬೆತ್ತಲೆ ಆಗಿ ಎಡಿಟ್ ಮಾಡಿ ಅದನ್ನು ದತ್ತಾತ್ರೇಯ ಹೆಗಡೆಯವರು ಕೆಲಸ ಮಾಡುವ ಪತ್ರಿಕೆಯಾದ ಕರಾವಳಿ ಮಾರುತದಲ್ಲಿ ಹಾಕುವುದಾಗಿ ಬೆದರಿಕೆಯನ್ನು ಹಾಕಿರುತ್ತಾನೆ ಎಂದು ದೂರಿದ್ದಾರೆ.

ರಾಜ್ ಗೋಪಾಲ್ ಆಚಾರ್ಯನು ಸಾಲ ನೀಡುವಾಗ ಆತನ ಹೆಂಡತಿಯ ಮೊಬೈಲ್ ನಲ್ಲಿ ಪಡೆದು ಕೊಂಡಿದ್ದ ಪಿರ್ಯಾದಿದಾರರವರ ಭಾವಚಿತ್ರವನ್ನು ಪತ್ರಿಕೆ ಮಾಧ್ಯಮಕ್ಕೆ ಚಾರಿತ್ರ್ಯ ತೇಜೋವಧೆ ಮಾಡಿ ಸುಳ್ಳು ಮಾಹಿತಿಯೊಂದಿಗೆ 3ನೇ ಆಪಾದಿತೆ ಸುಜಾತ ಮತ್ತು 1ನೇ ಆಪಾದಿತ ರಾಜ್ ಗೋಪಾಲ್ ನು 2ನೇ ಆಪಾದಿತ ದತ್ತಾತ್ರೇಯಾ ಹೆಗಡೆ ಎಂಬುವವನ ಮೂಲಕ ಸುಳ್ಳು, ಮಾಹಿತಿಯೊಂದಿಗೆ ಹಾಕಿದ್ದು ; ಈ ಮಾಹಿತಿ ಕರಾವಳಿ ಮಾರುತ ದಿ:16/06/2025ರಂದು ಪ್ರಕಟವಾಗಿರುತ್ತದೆ ಎಂದು ದೂರಿದ್ದಾರೆ.

ಅಲ್ಲದೇ ದೂರು ನೀಡಬಾರದು ಎಂದು 4ನೇ ಆಪಾದಿತ ಮೋಹನ್ ಎಂಬಾತನಿಂದ ಜೀವ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿರ್ಯಾದಿದಾರರು ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2025: THE BHARATIYA NYAYA SANHITA (BNS), 2023 (U/s-74,75(1)(ii), 79, 351(2),3(5)) ថថ ದಾಖಲಾಗಿರುತ್ತದೆ.

About Janardhana K M

Check Also

ಮರವಂತೆ ಪೋಸ್ಟ್‌ ಆಫೀಸ್ನಲ್ಲಿ ಕಳ್ಳತನ

ಬೈಂದೂರು ತಾಲೂಕು, ಮರವಂತೆ ಪೋಸ್ಟ್ ಆಫೀಸ್ನಲ್ಲಿ ಕಳ್ಳತನ ನಡೆದಿದ್ದು ಸುಮಾರು 15 ಸಾವಿರ ಕಳ್ಳತನವಾಗಿರುತ್ತದೆ ಮಧ್ಯರಾತ್ರಿಯಲ್ಲಿ ಕಳ್ಳರು ಪೋಸ್ಟ್ ಆಫೀಸಿನ  …

Leave a Reply

Your email address will not be published. Required fields are marked *