March 6, 2026
img_20251222_1057327630564779603941201.jpg
ಬೈಂದೂರು ;ಬೈಂದೂರು ವಲಯ ನಾಡದೋಣಿ ಮೀನುಗಾರರ ವತಿಯಿಂದ ತಾ-19-12*25ರಂದು ನಡೆಯುವ ಅಭಾರಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಮರವಂತೆ ಮಹಾರಾಜ ವರಾಹ ದೇವಸ್ಥಾನದಲ್ಲಿ ನಡೆಯಿತು, ಈ ಸಂದರ್ಭದಲ್ಲಿ ಶ್ರೀ ಮಹಾರಾಜ, ಗಂಗಾಧರೇಶ್ವರ ನಿಗೆ ಪೂಜೆ ನಿಡಿ. ಹಾಗೇಯೇ ಅರ್ಚಕರಾದ ನರಸಿಂಹ ಅಡಿಗ ಮತ್ತು ನಾಡದೋಣಿ ಅಧ್ಯಕ್ಷ ರಾದ ಬಿ ನಾಗೇಶ್ ಖಾರ್ವಿ ಯವರ ನೇತ್ರತ್ವದಲ್ಲಿ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿಲಾಯಿತು, 

ಈ ಸಂದರ್ಭದಲ್ಲಿ ನಾಗೇಶ್ ಖಾರ್ವಿಯವರು ಮಾತನ್ನಾಡಿ ಮೀನುಗಾರಿಕೆ ಆರಂಭ ಋತುವಿನಲ್ಲಿ ವರಾಹ ದೇವರಿಗೆ ಅಭಾರಿ ಸೇವೆ ನೀಡಬೇಕೆಂಬ ಸಂಕಲ್ಪದೊಂದಿಗೆ ಮೀನುಗಾರರಿಗೆಒಳ್ಳೆಯ ರೀತಿಯಿಂದ ಮೀನು ಲಭಿಸಿದ್ದು ಅದರಂತೆಯೇ ಇಂದು ವರಾಹ ದೇವಸ್ಥಾನದಲ್ಲಿ ಪೂಜೆ ನೀಡಿ ಮತ್ತು ತಾ16-1-26ರಂದು ಶುಕ್ರವಾರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬೆಳ್ಳಿ ರಥ ಎಳೆಯುವ ಸಂಕಲ್ಪದೊಂದಿಗೆ ,ಮತ್ತು ಈ ಕಾರ್ಯಕ್ರಮಕ್ಕೆ ಸುಮಾರು ಎಂಟರಿಂದ ಹತ್ತು ಸಾವಿರ ಭಕ್ತಾದಿಗಳು ಬರುವ ಸಾಧ್ಯತೆ ಇರುತ್ತದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಅರ್ಚಕರಾದ  ನರಸಿಂಹ ಅಡಿಗ ಅಧ್ಯಕ್ಷರಾದ ಬಿ ನಾಗೇಶ್ ಖಾರ್ವಿ, ಮಹೇಶ್ ಖಾರ್ವಿ, ಭಾಸ್ಕರ್ ಖಾರ್ವಿ, ಚಂದ್ರ, ಮತ್ತು ಎಲ್ಲಾ ದೋಣಿಯ ಸದಸ್ಯರು ಹಾಜರಿದ್ದರು

About The Author

Leave a Reply

Your email address will not be published. Required fields are marked *